ಭಾನುವಾರ, ಜೂನ್ 26, 2022
21 °C

Covid India Update| ಇಂದು 1,635 ಪ್ರಕರಣಗಳು ಪತ್ತೆ: 31 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 24 ಗಂಟೆಗಳಲ್ಲಿ ಭಾರತ 1,635 ಹೊಸ ಕೋವಿಡ್‌ ಪ್ರಕರಣಗಳನ್ನು ಕಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 4,31,40,068ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 14,841 ಇದೆ.

ಇದೇ ವೇಳೆ 31 ಸಾವುಗಳು ಸಂಭವಿಸಿವೆ. ಎಲ್ಲ ಸಾವುಗಳೂ ಕೇರಳದಿಂದಲೇ ವರದಿಯಾಗಿವೆ. ಇದರೊಂದಿಗೆ ಈ ವರೆಗೆ ದೇಶದಲ್ಲಿ 5,24,490 ಮಂದಿ ಕೋವಿಡ್‌ನಿಂದ ಪ್ರಾಣ ತೆತ್ತಂತೆ ಆಗಿದೆ.

ದೇಶದಲ್ಲಿ ಕೊರೊನಾ ವೈರಸ್‌ನ ಪಾಸಿಟಿವಿಟಿ ದರ ಸದ್ಯ ಶೇ 0.49 ರಷ್ಟು ಇದೆ.

ಸೋಮವಾರ 2,022 ಪ್ರಕರಣಗಳು, 46 ಸಾವು ವರದಿಯಾಗಿದ್ದವು.

ಭಾರತದಲ್ಲಿ ಈವರೆಗೆ 192.52 ಕೋಟಿ ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು