ಹರಿಯಾಣ: 51 ಕಿ.ಮೀ. ಅಂತರದ ಡ್ರೋನ್ ಹಾರಾಟದ ದಾಖಲೆ

ನವದೆಹಲಿ: ದಾಖಲೆಯ ಅಂದರೆ 51 ಕಿ.ಮೀ. ಅಂತರದ ಡ್ರೋನ್ ಹಾರಾಟ ಪ್ರಕ್ರಿಯೆ ಹರಿಯಾಣದಲ್ಲಿ ನಡೆದಿದೆ. ಎಚ್‌ಪಿಸಿಎಲ್ ಸಂಸ್ಥೆಯ ಪೈಪ್‌ಲೈನ್ ಅಳವಡಿಕೆಗೆ ಸಮೀಕ್ಷೆಗೆ ಈ ಹಾರಾಟ ನಡೆಸಲಾಗಿದೆ ಎಂದು ರೊಬೊಟಿಕ್ಸ್ ಮತ್ತು ಡ್ರೋನ್ ಕಂಪನಿಯು ಹೇಳಿಕೊಂಡಿದೆ.
ಒಮ್ನಿಪ್ರೆಸೆಂಟ್ ರೊಬೊಟ್ ಟೆಕ್ನಾಲಜಿಸ್ ಸಂಸ್ಥೆ ಸ್ಥಾಪಕ ಮತ್ತು ಸಿಇಒ ಆಕಾಶ್ ಸಿನ್ಹಾ ಅವರು, ನ. 5ರಂದು ಹಾರಾಟ ನಡೆಯಿತು. ಒಮ್ನಿ–ಹನ್ಸಾ ವಿ5 ಡ್ರೋನ್ 51 ಕಿ.ಮೀ. ಅಂತರ ಹಾರಾಟ ನಡೆಸಿದೆ. ನನ್ನ ಮಾಹಿತಿ ಅನುಸಾರ ಹಿಂದಿನ ದಾಖಲೆ 42 ಕಿ.ಮೀ ಆಗಿದೆ ಎಂದು ಹೇಳಿದರು.
ಡ್ರೋನ್ ಹಾರಾಟದ ಆರಂಭದಿಂದ ಅಂತ್ಯದವರೆಗೆ ಸ್ವಯಂಚಾಲಿತವಾಗಿತ್ತು. ನಾವು ಡ್ರೋನ್‌ನ ಚಲನೆಯ ಗತಿ ಗುರುತಿಸುವ ವ್ಯವಸ್ಥೆ ಹೊಂದಿದ್ದೆವು. ನಮ್ಮದೇ ಪರಿಕರವನ್ನು ಬಳಸಿ 4ಜಿ ನೆಟ್‌ವರ್ಕ್ ನೆರವಿನಿಂದ ಈ ಚಲನೆಯನ್ನು ಗುರುತಿಸಲಾಯಿತು ಎಂದು ತಿಳಿಸಿದರು.
100 ರಿಂದ 200 ಕಿ.ಮೀ ವರೆಗೂ ವ್ಯಾಪ್ತಿಯುಳ್ಳ ಡ್ರೋನ್ ಸೇವೆಯನ್ನು ಎಚ್‌ಪಿಸಿಎಲ್ ಬಯಸಿತ್ತು. ‘ಒಮ್ನಿಹನ್ಸಾ ವಿ5’ ಡ್ರೋನ್ ಬಳಕೆಗೆ ರನ್‌ವೇ ಬೇಕಿಲ್ಲ. ಹೆಲಿಕಾಪ್ಟರ್‌ನಂತೇ ಆಗಸಕ್ಕೆ ಚಿಮ್ಮಲಿದ್ದು, ಇಳಿಯಲಿದೆ. ಹಾರಾಟ ಆರಂಭವಾದ ನಂತರ ವಿಮಾನದಂತೆ ಸಂಚರಿಸಲಿದೆ ಎಂದು ಹೇಳಿದರು.
‘ಉಲ್ಲೇಖಿತ ಡ್ರೋನ್‌ನಲ್ಲಿ ವಿಟಿಒಎಲ್ (ವರ್ಟಿಕಲ್ ಟೇಕ್ ಆಫ್ ಅಂಡ್ ಲ್ಯಾಂಡಿಕ್) ಅಳವಡಿಸಲಾಗಿದೆ. ಈ ಮೂಲಕ ನಾವು ಯಶಸ್ವಿಯಾಗಿ ಭಾರತದಲ್ಲಿ ದೀರ್ಘ ಅಂತರದ ಡ್ರೋನ್ ಹಾರಾಟ ನಡೆಸಿದ್ದೇವೆ. ಇದು, ಕಣ್ಣಿಗೆ ಕಾಣದಷ್ಟೂ ದೂರದಲ್ಲಿ ಹಾರಾಟ ನಡೆಸಿತು. ಇದೊಂದು ದಾಖಲೆ’ ಎಂದು ಹೇಳಿದರು.
ಎಚ್‌ಪಿಸಿಎಲ್ ಸಂಸ್ಥೆಯು ದೆಹಲಿ ಮತ್ತು ಹರಿಯಣ ನಡುವೆ ಪೈಪ್‌ಲೈನ್ ಅಳವಡಿಸಲು ಉದ್ದೇಶಿಸಿದೆ. ಇದು, ಹರಿಯಾಣದ ಬಗದುರ್‌ಗರ್‌ನಿಂದ ಆರಂಭವಾಗಲಿದೆ. ಹಾರಾಟ ಸಂದರ್ಭದಲ್ಲಿ ಎಚ್‌ಪಿಸಿಎಲ್ ಪ್ರತಿನಿಧಿಗಳು ಇದ್ದರು ಎಂದು ತಿಳಿಸಿದರು.
ಡಿಜಿಸಿಎ ಅನುಮತಿ ನೀಡಿರುವಂತೆ ಡ್ರೋನ್ ಗರಿಷ್ಠ 400 ಅಡಿ ಎತ್ತರದವರೆಗೂ ಹೋಗಿತ್ತು ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.