ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಪಾಕ್‌: ಪರಮಾಣು ಸ್ಥಾವರ ಮಾಹಿತಿ ಹಂಚಿಕೆ

Last Updated 1 ಜನವರಿ 2023, 12:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಮ್ಮಲ್ಲಿನ ಪರಮಾಣು ಸ್ಥಾವರಗಳ ಪಟ್ಟಿಯನ್ನು ಭಾನುವಾರ ಪರಸ್ಪರ ವಿನಿಮಯ ಮಾಡಿಕೊಂಡವು.

ಉಭಯ ದೇಶಗಳು ಪರಸ್ಪರರ ಪರಮಾಣ ಸ್ಥಾವರಗಳು ಮತ್ತು ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡುವುದನ್ನು ಈ ಒಪ್ಪಂದ ನಿಷೇಧಿಸುತ್ತದೆ. ಅದರ ನಿಬಂಧನೆಗಳ ಪ್ರಕಾರ ಎರಡೂ ದೇಶಗಳ ಪಟ್ಟಿಯ ವಿನಿಮಯ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ.

ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ಪಟ್ಟಿಗಳ ವಿನಿಮಯ ನಡೆದಿದೆ ಎಂದು ಅದು ಹೇಳಿದೆ.

ಈ ಕುರಿತ ಒಪ್ಪಂದಕ್ಕೆ 1988ರ ಡಿಸೆಂಬರ್‌ 31ರಂದು ಎರಡೂ ದೇಶಗಳು ಸಹಿ ಹಾಕಿದ್ದು, 1991ರ ಜನವರಿ 27ರಂದು ಒಪ್ಪಂದ ಜಾರಿಗೆ ಬಂದಿದೆ. ಈ ಒಪ್ಪಂದದ ಪ್ರಕಾರ, ಪ್ರತಿ ವರ್ಷದ ಜನವರಿ ಮೊದಲ ದಿನದಂದು ಉಭಯ ದೇಶಗಳು ತಮ್ಮಲ್ಲಿನ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಪಟ್ಟಿಯನ್ನು ಕಡ್ಡಾಯವಾಗಿ ವಿನಿಮಯ ಮಾಡಿಕೊಳ್ಳಬೇಕು. 1992ರಿಂದ ಈ ಪ್ರಕ್ರಿಯೆ ನಡೆದುಕೊಂಡು ಬಂದಿದ್ದು, ಈ ಬಾರಿಯದ್ದು 32ನೇ ವಿನಿಮಯವಾಗಿದೆ ಎಂದು ಎಂಇಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT