ಶನಿವಾರ, ಜನವರಿ 29, 2022
19 °C

ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್‌’ನ ಪರೀಕ್ಷೆ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಸೋರ್, ಒಡಿಶಾ: ಸ್ವದೇಶಿ ನಿರ್ಮಿತ ಸೂಪರ್‌ ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್‌’ನ ಪರೀಕ್ಷಾರ್ಥ ಪ್ರಯೋಗ ಬುಧವಾರ ಯಶಸ್ವಿಯಾಯಿತು.

ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಪರೀಕ್ಷೆ ನೆರವೇರಿತು. ಸೂಪರ್‌ಸಾನಿಕ್ ಯುದ್ಧವಿಮಾನ ಸುಖೋಯ್ 30 ಎಂಕೆ–1 ನಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ, ನಿರ್ದೇಶಿತ ಪಥದಲ್ಲಿ ಸಾಗಿ ಗುರಿಯನ್ನು ನಾಶಪಡಿಸಿತು ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ.

‘ಈ ಪರೀಕ್ಷೆಯಲ್ಲಿ ದೊರೆತ ಯಶಸ್ಸು ಬ್ರಹ್ಮೋಸ್‌ನ ಇತರ ಆವೃತ್ತಿಯ ಕ್ಷಿಪಣಿಗಳ ಉತ್ಪಾದನೆಗೆ ಹಾದಿಯನ್ನು ಸುಗಮಗೊಳಿಸಿದಂತಾಗಿದೆ’ ಎಂದು ಇವೇ ಮೂಲಗಳು ಹೇಳಿವೆ.

ಕ್ಷಿಪಣಿ ಪರೀಕ್ಷೆ ನೆರವೇರಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಡಿಆರ್‌ಡಿಒ ಮುಖ್ಯಸ್ಥ ಡಾ.ಜಿ.ಸತೀಶ್‌ ರೆಡ್ಡಿ, ‘ಹಲವಾರು ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ವಾಯುಪಡೆ ಈ ಸಂಕೀರ್ಣವಾದ ಕ್ಷಿಪಣಿಯ ಅಭಿವೃದ್ಧಿ, ಪರೀಕ್ಷೆ ಕಾರ್ಯದಲ್ಲಿ ತೊಡಗಿದ್ದವು’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು