ಶುಕ್ರವಾರ, ಆಗಸ್ಟ್ 12, 2022
27 °C
ಇಬ್ಬರು ಭಾರತೀಯರನ್ನು ಉಗ್ರರ ಪಟ್ಟಿಗೆ ಸೇರಿಸಲು ಪಾಕ್‌ ಯತ್ನ

ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಪಾಕ್‌ ಯತ್ನ ವಿಶ್ವಸಂಸ್ಥೆಯಲ್ಲಿ ವಿಫಲ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಮೂಲಕ ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಪಾಕಿಸ್ತಾನದ ಯತ್ನವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಡ್ಡಿಪಡಿಸಿದೆ.

ಈ ಸಂಬಂಧ ಮಂಡಳಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಭಾರತವು, ಭಯೋತ್ಪಾದನೆ ವಿಚಾರವನ್ನೂ ರಾಜಕೀಯಗೊಳಿಸುವ ಪಾಕಿಸ್ತಾನದ ‘ನಿರ್ಲಜ್ಜ ಯತ್ನ’ವನ್ನು ಟೀಕಿಸಿದೆ. ಅಲ್‌ಕೈದಾ ನಿರ್ಬಂಧ ಸಮಿತಿಯಡಿ ಅಂಗಾರ ಅಪ್ಪಾಜಿ ಹಾಗೂ ಗೋಬಿಂದ ಪಟ್ನಾಯಕ್ ಹೆಸರು ಸೇರ್ಪಡೆಗೆ ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ಬೆಲ್ಜಿಯಂ ಪಾಕಿಸ್ತಾನದ ನಡೆಗೆ ಅಡ್ಡಿಪಡಿಸಿದೆ. ಇವರನ್ನು ಉಗ್ರರ ಪಟ್ಟಿಗೆ ಸೇರಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪಾಕಿಸ್ತಾನ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಅಜಯ್‌‌ ಮಿಸ್ತ್ರಿ ಹಾಗೂ ವೇಣುಮಾಧವ್‌ ಡೋಂಗ್ರ ಅವರನ್ನು ಉಗ್ರರ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಇದನ್ನೂ ಮಂಡಳಿಯು ಕಳೆದ ಜುಲೈನಲ್ಲಿ ನಿರಾಕರಿಸಿತ್ತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು