ಮಾರ್ಚ್ ವೇಳೆಗೆ ಇನ್ನಷ್ಟು ರಫೇಲ್ ಭಾರತಕ್ಕೆ: ರಾಜನಾಥ್ಸಿಂಗ್

ನವದೆಹಲಿ: ‘ಈಗಾಗಲೇ ಬಂದಿರುವ ರಫೇಲ್ ಯುದ್ಧವಿಮಾನಗಳ ಸಹಿತ ಒಟ್ಟು 17 ವಿಮಾನಗಳನ್ನು ಮುಂದಿನ ತಿಂಗಳೊಳಗೆ ಭಾರತ ಹೊಂದಲಿದೆ. ಒಪ್ಪಂದದಂತೆ ಎಲ್ಲ ರಫೇಲ್ ವಿಮಾನಗಳನ್ನು 2022ರ ಏಪ್ರಿಲ್ ವೇಳೆಗೆ ದೇಶ ಪಡೆದುಕೊಳ್ಳಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಹೇಳಿದರು.
‘ಈಗಾಗಲೇ 11 ರಫೇಲ್ಗಳು ಬಂದಿದ್ದು, ಮಾರ್ಚ್ ಹೊತ್ತಿಗೆ 17 ರಫೇಲ್ಗಳನ್ನು ಭಾರತ ಹೊಂದಲಿದೆ. 2022ರ ವೇಳೆಗೆ ಒಪ್ಪಂದದ ಪ್ರಕಾರ ಎಲ್ಲ ರಫೇಲ್ಗಳು ದೇಶಕ್ಕೆ ಬರಲಿವೆ. ಎಲ್ಲ ಹೊಸ ಯುದ್ಧ ವಿಮಾನಗಳನ್ನು ಸಾಂಪ್ರದಾಯಿಕವಾಗಿ ಸೂಕ್ತ ಸಮಾರಂಭದ ಮೂಲಕ ಭಾರತೀಯ ವಾಯುಪಡೆಗೆ (ಐಎಎಫ್) ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ’ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಜೊತೆಗೆ 2016ರಲ್ಲಿ ₹59,000 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಭಾರತಕ್ಕೆ ಬಂದ ಮೊದಲ ಐದು ರಫೇಲ್ ಯುದ್ಧ ವಿಮಾನಗಳನ್ನು 2020ರ ಸೆಪ್ಟೆಂಬರ್ 10 ರಂದು ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ವಿಮಾನಗಳ ಸೇರ್ಪಡೆ ಕಾರ್ಯಕ್ರಮಕ್ಕೆ ಐಎಎಫ್ನ ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ₹9.18 ಲಕ್ಷ ಜಿಎಸ್ಟಿ ಸೇರಿದಂತೆ ₹41.32 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.