ಭಾನುವಾರ, ಮಾರ್ಚ್ 7, 2021
31 °C

Covid-19 India Updetes: ಮಹಾರಾಷ್ಟ್ರ, ಕೇರಳದಲ್ಲಿ ಸಕ್ರಿಯ ಪ್ರಕರಣಗಳು ಅಧಿಕ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 24 ಗಂಟೆಗಳಲ್ಲಿ 10,064 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 17,411 ಮಂದಿ ಗುಣಮುಖರಾಗಿದ್ದಾರೆ. ದೇಶದಾದ್ಯಂತ ಈ ಒಂದು ದಿನದಲ್ಲಿ 137 ಮಂದಿ ಮೃತಪಟ್ಟಿದ್ದಾರೆ. ಕಳೆದ ಎಂಟು ತಿಂಗಳ ಅವಧಿಯಲ್ಲೇ ಇದು ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.

ದೇಶದಾದ್ಯಂತ ಸಕ್ರಿಯ ಪ್ರಕರಣಗಳ ಪೈಕಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚಿನ ಪ್ರಕರಣಗಳಿದ್ದು, ಕೇರಳದಲ್ಲಿ 68,617 ಮತ್ತು ಮಹಾರಾಷ್ಟ್ರದಲ್ಲಿ 51,887 ಸಕ್ರಿಯ ಪ್ರಕರಣಗಳಿವೆ. 8,631 ಸಕ್ರಿಯ ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದ್ದರೆ, 8,052 ಸಕ್ರಿಯ ಪ್ರಕರಣಗಳೊಂದಿಗೆ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ.

ಜ.18ರ ಹೊತ್ತಿಗೆ ದೇಶದಲ್ಲಿ 18,78,02,827 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಮವಾರ ಒಂದೇ ದಿನ 7,09,791 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ. 

ಮಹಾರಾಷ್ಟ್ರದಲ್ಲಿ 19.92 ಲಕ್ಷ ಪ್ರಕರಣ
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 19,92,683ಕ್ಕೆ ಏರಿಕೆಯಾಗಿದ್ದರೆ, 18,90,323 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 50,473 ಜನರು ಈವರೆಗೆ ಸಾವಿಗೀಡಾಗಿದ್ದಾರೆ. ಸದ್ಯ 51,887 ಸಕ್ರಿಯ ಪ್ರಕರಣಗಳಿವೆ.

ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 9,32,432 ಜನರಿಗೆ ಸೋಂಕು ತಗುಲಿದ್ದು, 12,175 ಜನರು ಸಾವಿಗೀಡಾಗಿದ್ದಾರೆ. 9,12,205 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 8,052 ಸಕ್ರಿಯ ಪ್ರಕರಣಗಳಿವೆ.

ಆಂಧ್ರಪ್ರದೇಶದಲ್ಲಿ 8,86,066, ಕೇರಳದಲ್ಲಿ 8,51,194, ತಮಿಳುನಾಡಿನಲ್ಲಿ 8,31,323, ದೆಹಲಿಯಲ್ಲಿ 6,32,590 ಮತ್ತು ಉತ್ತರ ಪ್ರದೇಶದಲ್ಲಿ 5,96,904 ಜನರಿಗೆ ಈವರೆಗೆ ಸೋಂಕು ತಗುಲಿದೆ.

ಭಾರತದಲ್ಲಿ ಕೋವಿಡ್‌ (ಇಂದಿನ ಮಾಹಿತಿ)
ಒಟ್ಟು ಪ್ರಕರಣಗಳು: 1,05,81,837
ಸಕ್ರಿಯ ಪ್ರಕರಣಗಳು: 2,00,528
ಈವರೆಗೆ ಗುಣಮುಖರಾದವರು: 1,02,28,753
ಒಟ್ಟು ಸಾವಿನ ಸಂಖ್ಯೆ: 1,52,556

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು