ಸೋಮವಾರ, ಜನವರಿ 17, 2022
20 °C

Indian Army Day 74ನೇ ಭಾರತೀಯ ಸೇನಾ ದಿನ: ಈ ದಿನದ ಮಹತ್ವವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶವು ಇಂದು (ಜನವರಿ 15, 2022) 74ನೇ ಭಾರತೀಯ ಸೇನಾ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಈ ದಿನದಂದು, ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಸಹೋದರತ್ವದ ಶ್ರೇಷ್ಠ ಉದಾಹರಣೆಯನ್ನು ನೀಡಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಿಸಲಾಗುತ್ತದೆ. ಕೋವಿಡ್–19 ಸಾಂಕ್ರಾಮಿಕದ ಮೂರನೇ ಅಲೆಯ ಕಾರಣ, ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳ ನಡುವೆ ಈ ದಿನವನ್ನು ಆಚರಿಸಲಾಗುತ್ತಿದೆ.

ಜನವರಿ 15ರಂದೇ ಸೇನಾ ದಿನ ಏಕೆ?

ಏಪ್ರಿಲ್ 1, 1895 ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ 1949 ರಲ್ಲಿ ಸೇನೆಯ ಮೊದಲ ಮುಖ್ಯಸ್ಥರನ್ನು ನೇಮಕ ಮಾಡಲಾಯಿತು. ಈ ಐತಿಹಾಸಿಕ ದಿನದಂದು ಭಾರತೀಯ ಸೇನೆಯ ಔಪಚಾರಿಕ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಬ್ಯಾಟನ್ ಹಸ್ತಾಂತರಿಸಿದ್ದರು.

ಐತಿಹಾಸಿಕ ಹಿನ್ನೆಲೆ

ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರವು ಭಾರತದ ಇತಿಹಾಸದಲ್ಲಿ ಮತ್ತು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಅತ್ಯಂತ ಪ್ರಮುಖ ಅಧ್ಯಾಯವಾಗಿದೆ.

ಈ ದಿನದಂದು ಎಲ್ಲಾ ಕಮಾಂಡ್ ಹೆಡ್‌ಕ್ವಾರ್ಟರ್‌ಗಳು ಮತ್ತು ನವದೆಹಲಿಯ ಮುಖ್ಯ ಪ್ರಧಾನ ಕಚೇರಿಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಮಿಲಿಟರಿ ಮೆರವಣಿಗೆಗಳು ಮತ್ತು ಭಾರತೀಯ ಸೇನೆಯಲ್ಲಿ ಇತ್ತೀಚೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಪ್ರದರ್ಶನಗಳು ಇರುತ್ತವೆ.

ಈ ವರ್ಷ ಪ್ರದರ್ಶನದಲ್ಲಿ ಏನನ್ನು ನಿರೀಕ್ಷಿಸಬಹುದು?

ಡ್ರೋನ್‌ಗಳು, ಸುಧಾರಿತ ಲಘು ಹೆಲಿಕಾಪ್ಟರ್‌ಗಳು, ಭಾರತೀಯ ಸೇನೆಯು ಗಾಲ್ವಾನ್ ಸೆಕ್ಟರ್‌ನಲ್ಲಿ ನಿಯೋಜಿಸಲು ಯೋಜಿಸಿರುವ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸಿರುವ ಹೊಸ ಲಘು ಯುದ್ಧ ಹೆಲಿಕಾಪ್ಟರ್‌ಗಳು ಈ ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು