ಶನಿವಾರ, ಸೆಪ್ಟೆಂಬರ್ 18, 2021
28 °C
ಸಿಂಗಪುರದ ಪೀಪಲ್ಸ್ ಆಕ್ಷನ್‌ ಪಾರ್ಟಿಯ ಸದಸ್ಯ ವಿಕ್ರಮ್ ನಾಯರ್

‘ಜಾಗತಿಕ ಮಟ್ಟದಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಭಾರತೀಯರು ಶ್ರಮಿಸಲಿ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ಭಾರತೀಯ ಔದ್ಯಮಿಕ ಸಮುದಾಯದವರು, ಜಾಗತಿಕವಾಗಿ ಸರ್ವರನ್ನೊಳಗೊಂಡ ಸಂಘಟಿತ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸುವಂತೆ ಸಿಂಗಪುರದ ಪೀಪಲ್ಸ್ ಆಕ್ಷನ್‌ ಪಾರ್ಟಿಯ ಸದಸ್ಯ ವಿಕ್ರಮ್ ನಾಯರ್ ಮನವಿ ಮಾಡಿದರು.

‘ಜಾಗತಿಕ ಬಹು ರಾಷ್ಟ್ರೀಯ ಸಮುದಾಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಭಾರತೀಯ ಉದ್ಯಮಿಗಳು ಮುಂದಾಗಬೇಕು. ಇದಕ್ಕೆ ಸಿಂಗಪುರ ಒಂದು ಪ್ರಮುಖ ಉದಾಹರಣೆಯಾಗಿದೆ‘ ಎಂದು ನಾಯರ್ ಹೇಳಿದರು.

ಸಿಂಗಪುರ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರಿ(ಎಸ್‌ಐಸಿಸಿಐ) ಶುಕ್ರವಾರ ಆನ್‌ಲೈನ್ ಮೂಲಕ ಆಯೋಜಿಸಿದ್ದ 56ನೇ ರಾಷ್ಟ್ರೀಯ ಅನುಸರಣೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತೀಯ ವ್ಯಾಪರ ಸಮುದಾಯದ ಬದ್ಧತೆಯನ್ನು ಉಲ್ಲೇಖಿಸಿದರು.

ಸಮಾರಂಭದಲ್ಲಿ ಭಾರತದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಕೈಗಾರಿಕಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ಇದೇ ವೇಳೆ ಎಸ್‌ಐಸಿಸಿಐ ಮತ್ತು ವಿವಿಧ ಸಂಸ್ಥೆಗಳು ಸೇರಿ ಭಾರತದ ಕೋವಿಡ್‌ ಪರಿಹಾರ ನಿಧಿಗಾಗಿ ₹5.49 ಕೋಟಿ (1 ಮಿಲಿಯನ್ ಎಸ್‌ಜಿಡಿ) ಹಣವನ್ನು ಸಂಗ್ರಹಿಸಿದ್ದು, ಈ ಹಣವನ್ನು ಭಾರತಕ್ಕೆ ಬೇಕಾದ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಕೊಡಲು ಸಿಂಗಪುರ ರೆಡ್‌ಕ್ರಾಸ್‌ ಸಂಸ್ಥೆಗೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು