ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಯ ನೂತನ ಲಾಂಛನ, ಧ್ವಜ ಅನಾವರಣ ಮಾಡಿದ ಪ್ರಧಾನಿ ಮೋದಿ

Last Updated 3 ಸೆಪ್ಟೆಂಬರ್ 2022, 3:51 IST
ಅಕ್ಷರ ಗಾತ್ರ

ಕೊಚ್ಚಿ:ನೌಕಾಪಡೆಯ ನೂತನ ಲಾಂಛನ ಮತ್ತು ಧ್ವಜವನ್ನು ಪ್ರಧಾನಿ ಮೋದಿ ಅವರು ಶುಕ್ರವಾರ ಅನಾವರಣ ಮಾಡಿದರು.

ಈ ಹಿಂದೆ ಬಿಳಿ ಧ್ವಜದ ಮೇಲಿನ ಎಡತುದಿಯಲ್ಲಿ ಭಾರತದ ಧ್ವಜವಿದ್ದು, ಬ್ರಿಟಿಷ್‌ ಕ್ರಾಸ್‌ ಧ್ವಜದ ಮಧ್ಯಭಾಗದಲ್ಲಿತ್ತು. ಕ್ರಾಸ್‌ನ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವಿತ್ತು. ನೂತನ ಧ್ವಜದಲ್ಲಿ ಕ್ರಾಸ್‌ ಅನ್ನು ಕೈಬಿಡಲಾಗಿದೆ. ನೂತನವಾಗಿ ರೂಪಿಸಲಾಗಿರುವ ಲಾಂಛನವನ್ನು ಧ್ವಜದ ಬಲಭಾಗದಲ್ಲಿ ಇರಿಸಲಾಗಿದೆ.

ದೇಶೀಯವಾಗಿ ನಿರ್ಮಿಸಲಾದ ದೇಶದ ಮೊದಲ ಯುದ್ಧವಿಮಾನ ವಾಹಕ ನೌಕೆ‘ಐಎನ್‌ಎಸ್‌ ವಿಕ್ರಾಂತ್‌’ ಅನ್ನು ಮೋದಿ ಅವರು ಇಲ್ಲಿನ ಹಡಗುಕಟ್ಟೆಯಲ್ಲಿ ನೌಕಾಪಡೆಯ ಸೇವೆಗೆ ನಿಯೋಜನೆ ಮಾಡಿದರು.ಇದೇ ವೇಳೆ ನೂತನ ಲಾಂಛನ ಮತ್ತು ಧ್ವಜ ಅನಾವರಣಗೊಳಿಸಿದ ಅವರು,ವಸಾಹತುಶಾಹಿಯ ಜೀತದ ಪ್ರತೀಕದಂತಿದ್ದ ಲಾಂಛನದ ಹೊರೆಯನ್ನು ಇಳಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತವು ಇದೀಗಬೃಹತ್ ಯುದ್ಧವಿಮಾನ ವಾಹಕ ನೌಕೆ ನಿರ್ಮಾಣ ಸಾಮರ್ಥ್ಯವಿರುವ ಕೆಲವೇ ದೇಶಗಳ ಸಾಲಿಗೆ ಸೇರಿದೆ. ಜತೆಗೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಚೀನಾದ ಯುದ್ಧನೌಕೆಗಳನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕೆ ಲಭ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT