ಬುಧವಾರ, ಸೆಪ್ಟೆಂಬರ್ 29, 2021
20 °C

ವೊಡಾಫೋನ್‌ ಕಂಪನಿಗೆ ತೆರಿಗೆ: ಸರ್ಕಾರಕ್ಕೆ ಆರಂಭಿಕ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ:‘ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿ ವೊಡಾಫೋನ್‌ ಸಮೂಹದ ಪರವಾಗಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಭಾರತ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಂಗಪುರದ ಹಿರಿಯ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ಗೆ ನಿಗದಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ವೊಡಾಫೋನ್‌ ಕಂಪನಿಯು ₹ 22,100 ಕೋಟಿ ತೆರಿಗೆ ಮೊತ್ತ ಪಾವತಿಸಬೇಕು ಎಂದು ಭಾರತ ಸರ್ಕಾರ ಬೇಡಿಕೆ ಇಟ್ಟಿತ್ತು. ಇದನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ಸೆಪ್ಟೆಂಬರ್‌ 25ರಂದು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಭಾರತ ಸರ್ಕಾರವು ಸಿಂಗಪುರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಬ್ರಿಟಿಷ್ ಆಯಿಲ್‌ ಮತ್ತು ಕೈರ್ನ್‌ ಎನರ್ಜಿಗೆ 1.2 ಶತಕೋಟಿ ಡಾಲರ್  ಹಿಂತಿರುಗಿಸುವಂತೆ ದಿ ಹೇಗ್‌ನ ಮಧ್ಯಸ್ಥಿಕೆ ನ್ಯಾಯಮಂಡಳಿಯು ಭಾರತ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶವನ್ನೂ ಭಾರತ ಪ್ರಶ್ನಿಸಿದೆ.

‘ವಿವಿಧ ದೇಶಗಳ ಜೊತೆಗಿನ ಹೂಡಿಕೆ ಸಂರಕ್ಷಣಾ ಒಪ್ಪಂದಗಳಲ್ಲಿ ತೆರಿಗೆ ಅಂಶವು ಒಳಗೊಂಡಿರುವುದಿಲ್ಲ. ತೆರಿಗೆ ಕಾನೂನು ದೇಶದ ಸಾರ್ವಭೌಮ ಹಕ್ಕು ಎನ್ನುವುದನ್ನು ಸರ್ಕಾರ ನಂಬಿದೆ’ ಎಂದು ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು