ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಮೊದಲ ವಾಣಿಜ್ಯ ಬಾಹ್ಯಾಕಾಶ ವೀಕ್ಷಣಾಲಯ

Last Updated 22 ಆಗಸ್ಟ್ 2022, 16:35 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ಭೂ ಕಕ್ಷೆಯಲ್ಲಿ 10 ಸೆಂಟಿಮೀಟರ್‌ನಷ್ಟು ಸಣ್ಣ ವಸ್ತುಗಳನ್ನೂಪತ್ತೆಮಾಡುವ ಮತ್ತು ಬಾಹ್ಯಾಕಾಶ ಚುಟವಟಿಕೆಗಳ ಮೇಲೆ ನಿಗಾ ಇರಿಸುವ ಭಾರತದ ಮೊದಲ ಬಾಹ್ಯಾಕಾಶ ಸಾಂದರ್ಭಿಕ ಅರಿವಿನವಾಣಿಜ್ಯ ವೀಕ್ಷಣಾಲಯವನ್ನು ಉತ್ತರಾಖಂಡದ ಗಡ್ವಾಲ್ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ.

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ನವೋದ್ಯಮ ಕಂಪನಿ ‘ದಿಗಂತರ’ ಈ ವೀಕ್ಷಣಾಲಯವನ್ನು ಸ್ಥಾಪಿಸುತ್ತಿದೆ. ಬಾಹ್ಯಾಕಾಶದಲ್ಲಿನ ತ್ಯಾಜ್ಯ, ಮಿಲಿಟರಿ ಉಪಗ್ರಹಗಳು ಸೇರಿ ಬಾಹ್ಯಾಕಾಶದಲ್ಲಿನ ಯಾವುದೇ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ವೀಕ್ಷಣಾಲಯ (ಎಸ್‌ಎಸ್‌ಎ–ಸ್ಪೇಸ್‌ ಸಿಚುವೇಷನಲ್‌ ಅವೇರ್‌ನೆಸ್‌ ಅಬ್ಸರ್‌ವೇಟರಿ) ನೆರವಾಗಲಿದೆ.

ಸದ್ಯ, ಅಮೆರಿಕ ತಾನು ಹೊಂದಿರುವ ಇಂತಹ ಹಲವು ವೀಕ್ಷಣಾಲಯಗಳು ಮತ್ತು ಜಗತ್ತಿನಾದ್ಯಂತ ಬಾಹ್ಯಾಕಾಶ ವಾಣಿಜ್ಯ ಕಂಪನಿಗಳು ಒದಗಿಸುವ ಹೆಚ್ಚುವರಿ ಮಾಹಿತಿಗಳ ನೆರವಿನೊಂದಿಗೆ ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆಯಲ್ಲಿಪ್ರಾಬಲ್ಯ ಸಾಧಿಸಿದೆ.ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಇಂತಹ ವೀಕ್ಷಣಾಲಯ ಸೌಲಭ್ಯಗಳ ಕೊರತೆ ಇದ್ದು, ಉತ್ತರಾಖಂಡದಲ್ಲಿ ಸ್ಥಾಪಿಸಲಾಗುತ್ತಿರುವ ಬಾಹ್ಯಾಕಾಶ ವೀಕ್ಷಣಾಲಯವು ಆ ಕೊರತೆ ನೀಗಿಸಲಿದೆ ಎಂದು ದಿಗಂತರ ಕಂಪನಿಯ ಸಿಇಒ ಅನಿರುದ್ಧ ಶರ್ಮಾ ತಿಳಿಸಿದರು.

ಈ ವೀಕ್ಷಣಾಲಯವು ಒದಗಿಸಲಿರುವ ದತ್ತಾಂಶ, ಉಪಗ್ರಹಗಳು ಮತ್ತು ಇತರ ಬಾಹ್ಯಾಕಾಶ ನೌಕೆಗಳಿರುವಸ್ಥಳ, ಅವುಗಳ ವೇಗ ಮತ್ತು ಚಲಿಸುತ್ತಿರುವ ಪಥದ ಬಗ್ಗೆ ಹೆಚ್ಚು ನಿಖರ ಮುನ್ಸೂಚನೆ ನೀಡುತ್ತದೆ. ಆ ಮೂಲಕ ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಗಳನಡುವಿನ ಘರ್ಷಣೆಗಳನ್ನು ತಪ್ಪಿಸಲು ನೆರವಾಗಲಿದೆ.ಉಪಖಂಡದ ಬಾಹ್ಯಾಕಾಶ ಚಟುವಟಿಕೆಯ ಮೇಲೆ ನಿಗಾ ಇರಿಸಲು ಭಾರತಕ್ಕೆ ದೇಶೀಯ ಸಾಮರ್ಥ್ಯವನ್ನೂ ಹೆಚ್ಚಿಸಲಿದೆ. ಚೀನಾದ ಉಪಗ್ರಹಗಳು ಭಾರತದ ಒಂದು ನಿರ್ದಿಷ್ಟ ಪ್ರದೇಶದ ಮೇಲೆ ದೀರ್ಘಕಾಲದಿಂದ ಕಣ್ಣಿಟ್ಟಿದ್ದರೆ ಅದರ ಪತ್ತೆಗೆ ಅಮೆರಿಕದಂತಹ ರಾಷ್ಟ್ರಗಳನ್ನು ಅವಲಂಬಿಸಬೇಕಿಲ್ಲ. ಈ ವೀಕ್ಷಣಾಲಯವೇ ಭಾರತಕ್ಕೆ ಒಂದು ವರವಾಗಲಿದೆ ಎಂದು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT