ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಜ್‌ನಿಂದ 125 ಮಂದಿ ರಕ್ಷಣೆ: ಮುಂಬೈಗೆ ಕರೆತಂದ ’ಐಎನ್‌ಎಸ್‌ ಕೊಚ್ಚಿ’

Last Updated 19 ಮೇ 2021, 8:13 IST
ಅಕ್ಷರ ಗಾತ್ರ

ಮುಂಬೈ: ‘ತೌತೆ’ ಚಂಡಮಾರುತದ ಅಬ್ಬರದಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ‘ಪಿ305’ ಬಾರ್ಜ್‌ನಿಂದ 125 ಮಂದಿಯನ್ನು ರಕ್ಷಿಸಲಾಗಿದ್ದು, ಅವರನ್ನು ಐಎನ್‌ಎಸ್‌ ಕೊಚ್ಚಿ ಯುದ್ಧನೌಕೆಯ ಮೂಲಕ ಬುಧವಾರ ಮುಂಬೈಗೆ ಕರೆತರಲಾಗಿದೆ.

ಭಾರತೀಯ ನೌಕಾಪಡೆಯು ಬಾರ್ಜ್‌ನಲ್ಲಿ ಸಿಲುಕಿದ್ದ 273 ಮಂದಿಯ ಪೈಕಿ 184 ಜನರನ್ನು ರಕ್ಷಿಸಿದೆ.

‘ನೌಕೆಯು ಈವರೆಗೆ 184 ಜನರ ಪೈಕಿ 125 ಮಂದಿಯನ್ನು ‘ಪಿ205’ ಬಾರ್ಜ್‌ನಿಂದ ರಕ್ಷಿಸಿದೆ. ಈಗಲೂ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಗಾಳಿಯು 90–100 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಅಲೆಗಳ ಎತ್ತರವು 9–10 ಮೀಟರ್‌ ಇದೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಯು ತುಂಬಾ ಕಠಿಣವಾಗಿದೆ’ ಎಂದು ಐಎನ್‌ಎಸ್ ಕೊಚ್ಚಿಯ ಕ್ಯಾಪ್ಟನ್‌ ಸಚಿನ್‌ ಸಿಕ್ವೇರಾ ಅವರು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT