ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌| ಮುಂಚೂಣಿ ಸಿಬ್ಬಂದಿಯ ವಿಮಾ ಭದ್ರತೆ ಅವಧಿ ಆರು ತಿಂಗಳು ವಿಸ್ತರಣೆ

Last Updated 19 ಏಪ್ರಿಲ್ 2022, 11:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಸಂಬಂಧಿತ ಸೇವೆಗೆ ನಿಯೋಜಿತರಾಗಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ರೂಪಿಸಿದ್ದ ವಿಮಾ ಯೋಜನೆಯ ಅವಧಿಯನ್ನು ಕೇಂದ್ರ ಸರ್ಕಾರ ಇನ್ನೂ ಆರು ತಿಂಗಳ ಕಾಲವಿಸ್ತರಿಸಿದೆ.

ಯೋಜನೆಯಡಿ ಈವರೆಗೆ 1,905 ಕ್ಲೇಮುಗಳನ್ನು ಇತ್ಯರ್ಥಪಡಿಸಲಾಗಿದೆ. ವಿಮಾ ಭದ್ರತೆಯನ್ನು ನಿಯೋಜಿತ ಸಿಬ್ಬಂದಿ ಅವಲಂಬಿತರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‌ ಸೇವೆಗೆ ನಿಯೋಜಿತರಾದ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ವಿಮಾ ಭದ್ರತೆ ಒದಗಿಸಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್‌ (ಪಿಎಂಜಿಕೆಪಿ) ಅನ್ನು ಮಾರ್ಚ್‌ 30, 2020ರಲ್ಲಿ ಆರಂಭಿಸಲಾಗಿತ್ತು. ಒಟ್ಟು ₹ 50 ಲಕ್ಷವರೆಗಿನ ವಿಮಾ ಭದ್ರತೆಯನ್ನು ಈ ಯೋಜನೆಯಡಿ ಒದಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT