ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಇಲಾಖೆ ದಾಳಿ: ₹ 220 ಕೋಟಿ ಕಪ್ಪು ಹಣ ಪತ್ತೆ

Last Updated 28 ಫೆಬ್ರುವರಿ 2021, 7:31 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈ ಮೂಲದ ಟೈಲ್ಸ್‌ ಮತ್ತು ಸ್ಯಾನಿಟರಿವೇರ್‌ ಕಂಪನಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಸುಮಾರು ₹ 220 ಕೋಟಿ ಲೆಕ್ಕ ಇಲ್ಲದ ಹಣವನ್ನು ಪತ್ತೆ ಮಾಡಿದೆ.

ಫೆಬ್ರುವರಿ 26ರಂದು ತಮಿಳುನಾಡು, ಗುಜರಾತ್‌ ಮತ್ತು ಕೋಲ್ಕತ್ತದಲ್ಲಿ ಈ ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿತ್ತು. ದಾಳಿ ಸಂದರ್ಭದಲ್ಲಿ ₹ 8.30 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಭಾರತದಲ್ಲಿ ಈ ಕಂಪನಿ ಟೈಲ್ಸ್‌ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಟೈಲ್ಸ್‌ಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಲೆಕ್ಕ ಇಲ್ಲದಿರುವುದು ಪತ್ತೆಯಾಗಿದೆ. ಕಂಪನಿಯ ರಹಸ್ಯ ಕಚೇರಿಯಲ್ಲಿ ಲೆಕ್ಕವಿಲ್ಲದ ವಹಿವಾಟು ನಡೆಸಿದ ದಾಖಲೆಗಳು ಪತ್ತೆಯಾಗಿವೆ. ಶೇಕಡ 50ರಷ್ಟು ವಹಿವಾಟಿಗೆ ದಾಖಲೆಗಳು ಇಲ್ಲ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಹಿಂದಿನ ವರ್ಷಗಳ ವಹಿವಾಟು ಹೋಲಿಸಿದಾಗ ಸುಮಾರು ₹ 120 ಕೋಟಿಯಷ್ಟು ಆದಾಯವನ್ನು ಮುಚ್ಚಿಡಲಾಗಿದೆ. ಜತೆಗೆ, ನಕಲಿ ಕಂಪನಿಗಳ ಹೆಸರಿನಲ್ಲಿ ಷೇರು ಪ್ರಿಮಿಯಂ ಮೂಲಕ ₹ 100 ಕೋಟಿ ಸಂಗ್ರಹಿಸಿರುವ ಬಗ್ಗೆ ಆದಾಯವನ್ನು ಘೋಷಿಸದಿರುವುದು ಸಹ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT