ಶುಕ್ರವಾರ, ನವೆಂಬರ್ 27, 2020
22 °C

₹500 ಕೋಟಿ ಅಘೋಷಿತ ಆದಾಯ ಪತ್ತೆಹಚ್ಚಿದ ಐ.ಟಿ ಇಲಾಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೆನ್ನೈ ಮೂಲದ ಪ್ರಮುಖ ಚಿನ್ನ, ಬೆಳ್ಳಿ ಗಟ್ಟಿ ತಯಾರಿಕಾ ಕಂಪನಿಯ ಆಸ್ತಿ ಹಾಗೂ ಕಚೇರಿಗಳಲ್ಲಿ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದು, ₹500 ಕೋಟಿ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಗುರುವಾರ ತಿಳಿಸಿದೆ.

ಚೆನ್ನೈ, ಮುಂಬೈ, ಕೋಲ್ಕತ್ತ, ಕೊಯಮತ್ತೂರು, ಸೇಲಂ, ಮಧುರೈ ಸೇರಿದಂತೆ 32 ಕಡೆಗಳಲ್ಲಿ ಐ.ಟಿ ಅಧಿಕಾರಿಗಳು ಶೋಧ ನಡೆಸಿದ್ದರು. ‘ಪತ್ತೆಯಾದ ಒಟ್ಟು ಅಘೋಷಿತ ಆದಾಯದ ಪೈಕಿ ತೆರಿಗೆ ಪಾವತಿದಾರರೇ ₹150 ಕೋಟಿ ಅಘೋಷಿತ ಆದಾಯವನ್ನು ತಿಳಿಸಿದ್ದಾರೆ. ಡೀಲರ್‌ ಗ್ರೂಪ್‌ನ ಉದ್ಯಮೇತರ ಬಂಡವಾಳ ಹೂಡಿಕೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ’ ಎಂದು ಸಿಬಿಡಿಟಿ ತಿಳಿಸಿದೆ.

‘ಹಲವೆಡೆ ಅಘೋಷಿತ ಸಂಗ್ರಹವೂ ಶೋಧದ ವೇಳೆ ಪತ್ತೆಯಾಗಿದೆ. ಅಂದಾಜು ₹400 ಕೋಟಿ ಮೌಲ್ಯದ 814 ಕೆ.ಜಿ. ಅಧಿಕ ಸಂಗ್ರಹವು ಪತ್ತೆಯಾಗಿದ್ದು, ಇದನ್ನು ತೆರಿಗೆಯಡಿ ತರಲಾಗುವುದು. ತೆರಿಗೆ ವಂಚನೆ ಮಾಡಲು ‘ಜೆಪ್ಯಾಕ್‌’ ಹೆಸರಿನಲ್ಲಿ ನಕಲಿ ಪ್ಯಾಕೆಜ್‌ ಸೃಷ್ಟಿಸಿ ಅದರಲ್ಲಿ ಈ ಗಟ್ಟಿಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಸರಕು ತಲುಪಿದ ಕೂಡಲೇ ಈ ಪ್ಯಾಕೆಜ್‌ಗಳನ್ನು ನಾಶ ಮಾಡಲಾಗುತ್ತಿತ್ತು’ ಎಂದು ಪ್ರಕಟಣೆಯಲ್ಲಿ ಸಿಬಿಡಿಟಿ ಉಲ್ಲೇಖಿಸಿದೆ.   

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.