ಹೈದರಾಬಾದ್: ಆಂಧ್ರ ಪ್ರದೇಶದಲ್ಲಿ ಆಟೊ ಮತ್ತು ಟ್ಯಾಕ್ಸಿಯಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆಗಾಗಿ ‘ಅಭಯಂ’ ಹೆಸರಿನ ಆ್ಯಪ್ ಅನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಸೋಮವಾರ ಬಿಡುಗಡೆಗೊಳಿಸಿದರು.

ಏಕಾಂಗಿಯಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷತೆಯನ್ನು ನೀಡುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ತುರ್ತುಸಂದರ್ಭದಲ್ಲಿ ಪೊಲೀಸರು ವಾಹನಗಳನ್ನು ಪತ್ತೆಹಚ್ಚಲು ಇದು ನೆರವಾಗಲಿದೆ.

‘ಆಟೊ ಹಾಗೂ ಟ್ಯಾಕ್ಸಿ ಚಾಲಕರ ಮೇಲೆ ಭರವಸೆ ಇಲ್ಲ ಎನ್ನುವ ಕಾರಣದಿಂದ ಈ ಆ್ಯಪ್ ಅಭಿವೃದ್ಧಿಪಡಿಸಿಲ್ಲ. ಬದಲಾಗಿ ಅವುಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದು ಎನ್ನುವ ಉದ್ದೇಶದಿಂದ ತಯಾರಿಸಲಾಗಿದೆ. ಫೆ.1ರೊಳಗಾಗಿ 5 ಸಾವಿರ ವಾಹನಗಳಲ್ಲಿ ಟ್ರ್ಯಾಕಿಂಗ್ ಉಪಕರಣಗಳನ್ನು ಅಳವಡಿಸಲಾಗುವುದು. ಜು.1ಕ್ಕೆ 50 ಸಾವಿರ ಹಾಗೂ 2021 ನವೆಂಬರ್ ಒಳಗಾಗಿ 1 ಲಕ್ಷ ವಾಹನಗಳಲ್ಲಿ ಈ ಉಪಕರಣ ಅಳವಡಿಸಲಾಗುವುದು’ ಎಂದು ಜಗನ್ ತಿಳಿಸಿದರು.

ಕಾರ್ಯ ಹೇಗೆ: ಮಹಿಳೆಯರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಟೊ, ಟ್ಯಾಕ್ಸಿ ಹತ್ತುವ ಮುನ್ನ ವಾಹನದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಈ ಮೂಲಕ ಚಾಲಕರ ಚಿತ್ರ ಸಹಿತ, ವಾಹನದ ಪೂರ್ಣ ಮಾಹಿತಿ ಅವರ ಮೊಬೈಲ್‌ಗೆ ಬರಲಿದೆ. ಪ್ರಯಾಣದ ಸಂದರ್ಭದಲ್ಲಿ ಏನಾದರೂ ತೊಂದರೆ ಆದರೆ, ಆ್ಯಪ್ ಮೂಲಕವೇ ಈ ಮಾಹಿತಿಯನ್ನು ಅವರು ಪೊಲೀಸರಿಗೆ ಕಳುಹಿಸಬಹುದು. ಪೊಲೀಸರು ವಾಹನವನ್ನು ಟ್ರ್ಯಾಕಿಂಗ್ ಉಪಕರಣದ ಮುಖಾಂತರ ಪತ್ತೆ ಹಚ್ಚಲಿದ್ದಾರೆ. ಸ್ಮಾರ್ಟ್‌ಫೋನ್ ಇಲ್ಲದೇ ಇರುವ ಮಹಿಳೆಯರು, ವಾಹನದೊಳಗೆ ಇರುವ ಉಪಕರಣಕ್ಕೆ ಜೋಡಣೆ ಆಗಿರುವ ಪ್ಯಾನಿಕ್‌ಬಟನ್ ಒತ್ತಬಹುದು. ಈ ಮಾಹಿತಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.