ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಟ್ಟು ಆಸ್ಕರ್‌ ರೇಸ್‌ನಿಂದ ಹೊರಕ್ಕೆ; ಬಿಟ್ಟು ಕಿರುಚಿತ್ರ ಮುಂದಿನ ಸುತ್ತಿಗೆ

Last Updated 10 ಫೆಬ್ರುವರಿ 2021, 7:31 IST
ಅಕ್ಷರ ಗಾತ್ರ

ನವದೆಹಲಿ: 93ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದ ಭಾರತದ ‘ಜಲ್ಲಿಕಟ್ಟು’ ಸಿನಿಮಾ, ಆಸ್ಕರ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ, ಭಾರತದ ಕಿರುಚಿತ್ರ ‘ಬಿಟ್ಟು’, ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದ ಮೂಲಕ ಆಸ್ಕರ್‌ ಸ್ಪರ್ಧೆಯ ಮುಂದಿನ ಸುತ್ತನ್ನು ಪ್ರವೇಶಿಸಿದೆ.

‘ಆಸ್ಕರ್‌ ಸ್ಪರ್ಧೆಯ ಅಂತಿಮ ಸುತ್ತಿಗಾಗಿ ಐದು ಸಿನಿಮಾಗಳನ್ನು ಆರಿಸಲಾಗುತ್ತದೆ. ಈ ಐದು ಸಿನಿಮಾಗಳನ್ನು ಅತ್ಯುತ್ತಮ 15 ಚಿತ್ರಗಳಿಂದ ಆರಿಸಲಾಗುತ್ತದೆ. ಲಿಜೊ ಜೋಸ್ ಪೆಲ್ಲಿಶ್ಶೇರಿ ನಿರ್ದೇಶಿಸಿರುವ ಮಲಯಾಳಂ ಸಿನಿಮಾ ‘ಜಲ್ಲಿಕಟ್ಟು’, ಈ 15 ಚಿತ್ರಗಳಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ’ ಎಂದು ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ ಆರ್ಟ್‌ ಮತ್ತು ಸೈನ್ಸ್‌ (ಎಎಂಪಿಎಎಸ್‌) ಬುಧವಾರ ಪ್ರಕಟಿಸಿದೆ.

ಥಾಮಸ್ ವಿಂಟರ್‌ಬರ್ಗ್‌ ಅವರ ‘ಎನದರ್‌ ರೌಂಡ್‌’, ಆಂಡ್ರೇ ಕೊಂಚಲೋವ್ಸ್ಕಿ ನಿರ್ದೇಶನದ ‘ಡಿಯರ್‌ ಕಾಮ್ರೇಡ್‌’(ರಷ್ಯಾ), ಅಗ್ನಿಸ್ಕಾ ಹಾಲೆಂಡ್‌ನ ‘ಚಾರ್ಲಾಟನ್’, ಎರಡು ಸಾಕ್ಷ್ಯ ಚಿತ್ರಗಳಾದ ‘ದಿ ಮೊಲೆ ಏಜೆಂಟ್‌’(ಚಿಲೆ), ‘ಕಲೆಕ್ಟಿವ್‌’(ರೊಮೇನಿಯಾ), ‘ಕ್ವಾ ವಾಡಿಸ್, ಐಡಾ?’, ‘ಟು ಆಫ್‌ ಅಸ್‌’,‘ಬೆಟರ್‌ ಡೇಸ್‌’, ‘ಸನ್‌ ಚಿಲ್ಡ್ರನ್‌’, ‘ನೈಟ್‌ ಆಫ್‌ ದಿ ಕಿಂಗ್ಸ್‌’,‘ಐ ಅಮ್‌ ನೋ ಲಾಂಗರ್‌ ಹಿಯರ್‌’,‘ಹೋಪ್‌’,‘ಎ ಸನ್‌’,‘ದ ಮ್ಯಾನ್‌ ಹೂ ಸೋಲ್ಡ್‌ ಹಿಸ್ ಸ್ಕಿನ್‌’ ಸೇರಿದಂತೆ ಒಟ್ಟು 15 ಚಿತ್ರಗಳು ಆಯ್ಕೆಯಾಗಿವೆ.

ಕರಿಷ್ಮಾ ದೇವ್ ದುಬೆ ನಿರ್ದೇಶನ ‘ಬಿಟ್ಟು’ ಸಿನಿಮಾವು ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದ ಮೂಲಕ ಆಸ್ಕರ್‌ ರೇಸ್‌ನಲ್ಲಿ ಮುಂದುವರಿದಿದೆ.

ಈ ಸುತ್ತಿನಲ್ಲಿ ‘ಬಿಟ್ಟು’,‘ಡಾ ಯೀ’,‘ಫಿಲೀಂಗ್‌ ಥ್ರೂ’,‘ದ ಹ್ಯೂಮನ್‌ ವಾಯಿಸ್‌’,‘ದಿ ಕಿಕ್ಸ್ಲೆಡ್ ಕಾಯಿರ್’,‘ದಿ ಲೆಟರ್ ರೂಮ್’,‘ದಿ ಪ್ರೆಸೆಂಟ್’,‘ದಿ ಡಿಸ್ಟೆಂಟ್‌ ಸ್ಟ್ರೇಜರ್ಸ್‌’,‘ದಿ ವ್ಯಾನ್‌’,‘ವೈಟ್‌ ಐ’ ಸಿನಿಮಾಗಳು ಸೇರಿ ಒಟ್ಟು 10 ಸಿನಿಮಾಗಳು ಆಯ್ಕೆಯಾಗಿವೆ.

ಈ ಬಗ್ಗೆ ‘ಬಿಟ್ಟು’ ಸಿನಿಮಾದ ನಿರ್ಮಾಪಕರು ಇನ್‌ಸ್ಟಾಗ್ರಾಂನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT