ಭಾನುವಾರ, ಡಿಸೆಂಬರ್ 4, 2022
21 °C

ಒಂಟಿಯಾಗಿ ಬರುವ ಮಹಿಳೆಯರಿಗೆ ಪ್ರವೇಶವಿಲ್ಲ: ಜಾಮಾ ಮಸೀದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಒಂಟಿಯಾಗಿ ಬರುವ ಮಹಿಳೆಯರಿಗೆ ದೆಹಲಿಯಲ್ಲಿರುವ ಜಾಮಾ ಮಸೀದಿ ಆಡಳಿತ ಪ್ರವೇಶ ನಿರಾಕರಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಾಮಾ ಮಸೀದಿ ಪಿಆರ್‌ಒ ಸಬಿವುಲ್ಲಾ ಖಾನ್, ಒಂಟಿಯಾಗಿ ಬರುವ ಮಹಿಳೆಯರಿಗೆ ಮಾತ್ರವೇ ನಿರ್ಬಂಧ ಅನ್ವಯವಾಗುತ್ತದೆ. ಕುಟುಂಬದೊಂದಿಗೆ ಅಥವಾ ಪತಿಯೊಂದಿಗೆ ಬರುವ ಮಹಿಳೆಯರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ಮಸೀದಿ ಆವರಣದಲ್ಲಿ ನಡೆಯುವ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

'ಮಸೀದಿಗೆ ಮಹಿಳೆಯರು ಪ್ರವೇಶಿಸದಂತೆ ನಿಷೇಧ ಹೇರಿಲ್ಲ. ಮಹಿಳೆಯರು ಒಬ್ಬಂಟಿಯಾಗಿ ಬಂದಾಗ ಅನುಚಿತವಾಗಿ ವರ್ತಿಸುವುದು, ಟಿಕ್‌ಟಾಕ್‌ ಅಥವಾ ಡಾನ್ಸ್‌ ವಿಡಿಯೊಗಳನ್ನು ಚಿತ್ರೀಕರಿಸುವುದು ವರದಿಯಾಗುತ್ತಿವೆ. ಇವುಗಳಿಗೆ ತಡೆಯೊಡ್ಡುವುದಕ್ಕಾಗಿ ನಿಷೇಧ ಹೇರಲಾಗಿದೆ. ಕುಟುಂಬದೊಂದಿಗೆ ಬರುವವರಿಗೆ ಅಥವಾ ದಂಪತಿಗಳಿಗೆ ಯಾವುದೇ ನಿರ್ಬಂಧ ಇಲ್ಲ. ಧಾರ್ಮಿಕ ತಾಣವನ್ನು ಹುಡುಗರು, ಹುಡುಗಿಯರ ಭೇಟಿ ಸ್ಥಳವನ್ನಾಗಿಸುವುದು ತರವಲ್ಲ' ಎಂದು ವಿವರಿಸಿದ್ದಾರೆ.

ಮಸೀದಿಯ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು