ಶನಿವಾರ, ಜನವರಿ 23, 2021
25 °C

ಜಮ್ಮು–ಕಾಶ್ಮೀರ: ₹28,400 ಕೋಟಿ ಮೌಲ್ಯದ ಕೈಗಾರಿಕಾಭಿವೃದ್ಧಿ ಯೋಜನೆ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಹೊಸ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಆಡಳಿತವು ₹28,400 ಕೋಟಿ ಮೌಲ್ಯದ ನೂತನ ಕೈಗಾರಿಕಾ ಅಭಿವೃದ್ಧಿ ಯೋಜನೆಯನ್ನು(ಐಡಿಎಸ್‌) ಗುರುವಾರ ಘೋಷಿಸಿದೆ.

‘ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರ ಇದಾಗಿದ್ದು, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ನೂತನ ಐಡಿಎಸ್‌ಗೆ ಒಪ್ಪಿಗೆ ನೀಡಿದೆ. ಈ ಪ್ರದೇಶದ ಸಾಮಾಜಿಕ–ಆರ್ಥಿಕ ಅಭಿವೃದ್ಧಿಯ ಆಗಮನದ ಕಾಲವನ್ನು ಈ ಯೋಜನೆಯು ಸೂಚಿಸುತ್ತದೆ. ಈ ಯೋಜನೆಯು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 2037ರವರೆಗೆ ಇರಲಿದ್ದು, ಇದರ ಒಟ್ಟಾರೆ ವೆಚ್ಚ ₹28,400 ಕೋಟಿ’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹೇಳಿದರು. 

‘ಬ್ಲಾಕ್‌ ಮಟ್ಟಕ್ಕೂ ಅಭಿವೃದ್ಧಿಯನ್ನು ಹೊತ್ತೊಯ್ಯುತ್ತಿರುವ ಮೊದಲ ಕೈಗಾರಿಕಾ ಪ್ರೋತ್ಸಾಹ ಯೋಜನೆ ಇದಾಗಿದೆ. ಈ ಯೋಜನೆಯು ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲಿದ್ದು, ಪ್ರಸ್ತುತ ಇರುವ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಲಿದೆ. 4.5 ಲಕ್ಷ ಜನರಿಗೆ ಈ ಯೋಜನೆಯು ಉದ್ಯೋಗ ಸೃಷ್ಟಿಸಲಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು