ಬುಧವಾರ, ಮಾರ್ಚ್ 22, 2023
21 °C

ಜಮ್ಮು–ಕಾಶ್ಮೀರ: ಕ್ಷೇತ್ರ ವಿಂಗಡಣಾ ಆಯೋಗದಿಂದ ದೂರ ಉಳಿಯಲು ಪಿಡಿಪಿ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳ ಪುನರ್‌ ವಿಂಗಡಣಾ ಆಯೋಗವನ್ನು ಭೇಟಿ ಮಾಡದಿರಲು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ನಿರ್ಧರಿಸಿದೆ. 

ಈ ಬಗ್ಗೆ ಪಿಡಿಪಿಯು ಕ್ಷೇತ್ರ ವಿಂಗಡಣಾ ಆಯೋಗದ ಮುಖ್ಯಸ್ಥರಾದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರಿಗೆ ಪತ್ರ ಬರೆದಿದೆ. 

‘ಆಯೋಗದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ. ಮೊದಲೇ ನಿರ್ಧಾರವಾಗಿರುವಂತಹ ಫಲಿತಾಂಶ ನೀಡುವ ಪ್ರಕ್ರಿಯೆಯ ಭಾಗವಾಗಲು ಪಕ್ಷ ಇಚ್ಛಿಸುವುದಿಲ್ಲ. ಇದರಿಂದ ಜಮ್ಮು–ಕಾಶ್ಮೀರದ ಜನರ ಹಿತಾಸಕ್ತಿಗೆ ಮತ್ತಷ್ಟು ತೊಂದರೆ ಉಂಟಾಗಬಹುದು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಲೋನ್ ಹಂಜುರಾ ಅವರು ಪತ್ರದಲ್ಲಿ ಹೇಳಿದ್ದಾರೆ.

‘ಸಂವಿಧಾನದ 370ನೇ ವಿಧಿಯನ್ನು ‘ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿ’ ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನರ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಪತ್ರದಲ್ಲಿ ದೂರಲಾಗಿದೆ.

ಮೂವರು ಸದಸ್ಯರನ್ನೊಳಗೊಂಡ ಕ್ಷೇತ್ರ ವಿಂಗಡಣಾ ಆಯೋಗವು ಮಂಗಳವಾರದಿಂದ ಕೇಂದ್ರಾಡಳಿತ ಪ್ರದೇಶದ ರಾಜಕೀಯ ನಾಯಕರನ್ನು ಭೇಟಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು