ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನತೆಗೆ ಪ್ರೀತಿ ಬೇಕಿದೆ. ಆದರೆ ದೊರಕಿದ್ದೇನು? ಬಿಜೆಪಿಯ ಬುಲ್ಡೋಜರ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಜನರಲ್ಲಿ ಭೀತಿ ಸೃಷ್ಟಿಸಿದೆ ಎಂಬ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಹಂಚಿದ್ದಾರೆ.

ಆಡಳಿತದ ಕ್ರಮವನ್ನು ಕಾಂಗ್ರೆಸ್ ಜತೆಗೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷ ತೀವ್ರ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ವ್ಯಕ್ತಿ ಹತ್ಯೆ: ಬಿಎಸ್ಎಫ್, ಅಮಿತ್ ಶಾ ಜನರ ಕ್ಷಮೆ ಕೋರಬೇಕು –ಅಭಿಷೇಕ್

ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿದೆ. ಆದರೆ ಅವರಿಗೆ ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್! ಹಲವು ದಶಕಗಳಿಂದ ಜನರು ಶ್ರಮದಿಂದ ಬೆಳೆಸಿದ ನಾಡನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಜನರನ್ನು ವಿಭಜಿಸುವ ಮೂಲಕ ಅಲ್ಲ, ಜನರನ್ನು ಒಗ್ಗೂಡಿಸುವ ಮೂಲಕ ಕಾಶ್ಮೀರವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ... ದ. ಕ.ದವರು ಬ್ಯಾಂಕ್ ಕಟ್ಟಿದರು, ಗುಜರಾತಿಗಳು ನುಂಗಿ ನೀರು ಕುಡಿದರು: ಸಿದ್ದು ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.