ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: 2011ರ ಜನಗಣತಿ ಆಧರಿಸಿಯೇ ಕ್ಷೇತ್ರ ಪುನರ್‌ವಿಂಗಡಣೆ– ಆಯೋಗ

Last Updated 9 ಜುಲೈ 2021, 14:31 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪಾರದರ್ಶಕವಾಗಿರುವುದು. 2011ರಲ್ಲಿ ನಡೆದ ಜನಗಣತಿಯ ಅಂಕಿ–ಅಂಶಗಳನ್ನು ಆಧರಿಸಿಯೇ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಕ್ಷೇತ್ರಗಳ ಪುನರ್ವಿಂಗಡಣಾ ಆಯೋಗ ಶುಕ್ರವಾರ ಹೇಳಿದೆ.

‘ಜಮ್ಮು–ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಬಹು ಸಂಕೀರ್ಣವಾದ ಕಾರ್ಯ. ಅದು ಸರಳವಾದ ಗಣಿತಸೂತ್ರಗಳನ್ನು ಆಧರಿಸಿ ಮಾಡುವ ಲೆಕ್ಕಾಚಾರವಲ್ಲ’ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ಚಂದ್ರ ಹೇಳಿದರು.

ಆಯೋಗದ ಮೂವರು ಸದಸ್ಯರ ಸಮಿತಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿದ್ದ ನಾಲ್ಕು ದಿನಗಳ ಪ್ರವಾಸ ಪೂರ್ಣಗೊಂಡ ನಂತರ ಅವರು ಈ ಮಾಹಿತಿ ನೀಡಿದರು.

‘ಪುನರ್ವಿಂಗಡಣೆ ಕಾರ್ಯವನ್ನು ಪಾರದರ್ಶಕವಾಗಿಯೇ ನೆರವೇರಿಸಲಾಗುವುದು. ಕರಡನ್ನು ಸಾರ್ವಜನಿಕರ ಮುಂದಿಟ್ಟು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು’ ಎಂದೂ ಹೇಳಿದರು.

‘ಕ್ಷೇತ್ರಗಳ ಪುನರ್ವಿಂಗಡಣೆಗೆ ಜನಸಂಖ್ಯೆಯೇ ಆಧಾರವಾಗಿರುತ್ತದೆ. ಆದರೆ, ಈ ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರಗಳ ಭೌಗೋಳಿಕ ಅಂಶಗಳು, ಸ್ಥಳೀಯ ವೈವಿಧ್ಯಗಳು, ಸಂಪರ್ಕ–ಸಂವಹನದ ಲಭ್ಯತೆಯಂತಹ ಮಾಹಿತಿಯನ್ನು ಪರಿಗಣಿಸಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT