ನವದೆಹಲಿ: ‘ಭ್ರಷ್ಟರು ಒಂದೇ ವೇದಿಕೆಯಲ್ಲಿ ಬರುತ್ತಿದ್ದಾರೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ವಿರುದ್ಧ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಬುಧವಾರ ವಾಗ್ದಾಳಿ ನಡೆಸಿದ್ದಾರೆ. ಜೆಡಿಯು ಮತ್ತು ಶಿವಸೇನೆಯಂತಹ (ಉದ್ಧವ್ ಠಾಕ್ರೆ ಬಣ) ಪಕ್ಷಗಳು ಒಂದು ಸಮಯದಲ್ಲಿ ಮೋದಿಯವರ ಮಿತ್ರರಾಗಿದ್ದರು, ಈಗ ಭ್ರಷ್ಟರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮಂಗಳವಾರ ಬಿಜೆಪಿ ಪ್ರಧಾನ ಕಚೇರಿಯ ವಿಸ್ತರಣೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ್ದ ಮೋದಿ, ಭ್ರಷ್ಟಚಾರದ ವಿರುದ್ಧ ತಮ್ಮ ಸರ್ಕಾರ ಅಭಿಯಾನವನ್ನು ಕೈಗೊಂಡಿವುದರಿಂದ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡುತ್ತಿವೆ, ದೇಶದ ಬೆಳವಣಿಗೆಯನ್ನು ತಡೆಯಲು ‘ಭಾರತ ವಿರೋಧಿ’ ಶಕ್ತಿಗಳು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿವೆ ಎಂದು ಹೇಳಿದ್ದರು.

ಮೋದಿ ಮಾತಿಗೆ ಪ್ರತಿಕ್ರಿಯಿಸಿರುವ ಸಿಬಲ್, ‘ಪ್ರಧಾನಿಯವರೇ ಪ್ರತಿಪಕ್ಷಗಳು ಭಯಪಡುತ್ತಿವೆ, ಈಗ ಒಂದೇ ವೇದಿಕೆಯಲ್ಲಿ ಎಲ್ಲರೂ ಭ್ರಷ್ಟರಾಗಿದ್ದಾರೆ. ಆದರೆ ಮೋದಿಯವರೇ ಶಿವಸೇನೆ, ಅಕಾಲಿ ದಳ, ಜೆಡಿಯು, ಪಿಡಿಪಿ, ಬಿಎಸ್‌ಪಿ, ಒಂದು ಕಾಲದಲ್ಲಿ ನಿಮ್ಮ ಮಿತ್ರಪಕ್ಷಗಳಾಗಿದ್ದವು ಮತ್ತು ನೀವು ಅವರೊಂದಿಗೆ ಸರ್ಕಾರವನ್ನು ರಚಿಸಿದ್ದೀರಿ!’ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈಗ ಅವರು ಭ್ರಷ್ಟರಾಗಿದ್ದಾರೆ! ಆಗ ಅವರು ಇರಲಿಲ್ಲವೇ?’ ಎಂದು ಮಾಜಿ ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಭ್ರಷ್ಟಾಚಾರದ ವಿರುದ್ಧ ಇಂತಹ ದೊಡ್ಡ ಅಭಿಯಾನ ನಡೆದು ಭ್ರಷ್ಟರನ್ನು ಬೆಚ್ಚಿ ಬೀಳಿಸಿರಲಿಲ್ಲ. ‘ಭ್ರಷ್ಟಾಚಾರದಲ್ಲಿ ತೊಡಗಿರುವವರೆಲ್ಲರೂ ಒಂದೇ ವೇದಿಕೆಗೆ ಬಂದಿದ್ದಾರೆ’ ಎಂದು ಮೋದಿ ಹೇಳಿದ್ದರು.

ಇವನ್ನೂ ಓದಿ: ‘ಕೈ’ ಸಂಸದರೆಲ್ಲರ ರಾಜೀನಾಮೆ? ಪಕ್ಷದ ಮುಂದೆ ಪ್ರಸ್ತಾವವಿಟ್ಟ ಯುವ ಎಂ.ಪಿಗಳು

ರಾಜಸ್ಥಾನ: ಆರೋಗ್ಯ ಹಕ್ಕು ಮಸೂದೆ ವಿರೋಧಿಸಿ ವೈದ್ಯರ ಸಾಮೂಹಿಕ ರಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.