ಶನಿವಾರ, ನವೆಂಬರ್ 28, 2020
17 °C

ಬಿಹಾರ: ವಿಧಾನಸಭೆ ಸ್ಪೀಕರ್‌ ಆಗಿ ಮಾಂಝಿ ಆಯ್ಕೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರು ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಆಯ್ಕೆಯಾಗುವ ಸಂಭವ ಇದೆ.

ಎನ್‌ಡಿಎದ ಉನ್ನತ ಮೂಲಗಳು  ’ಪ್ರಜಾವಾಣಿ‘ಗೆ ಇದನ್ನು ದೃಢಪಡಿಸಿವೆ. ಈ ಬಗ್ಗೆ ದೀಪಾವಳಿ ಬಳಿಕ ಎನ್‌ಡಿಎ ಸಭೆಯಲ್ಲಿ ನಿರ್ಧಾರವಾಗಿ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: 

ಮಾಂಝಿ ಅವರು ಗಯಾದ ಇಮಾಂಗಂಜ್‌ನಲ್ಲಿ ಆರ್‌ಜೆಡಿ ಅಭ್ಯರ್ಥಿ ಉದಯ್‌ ನಾರಾಯಣ ಚೌಧರಿ ಅವರ ವಿರುದ್ಧ ಜಯ ಗಳಿಸಿದ್ದಾರೆ.

ಹಿಂದೂಸ್ತಾನ್‌ ಅವಾಂ ಮೋರ್ಚಾದ ಅಧ್ಯಕ್ಷ ಮತ್ತು  ಶಾಸಕಾಂಗ ಪಕ್ಷದ ನಾಯಕರಾಗಿಯೂ ಆಯ್ಕೆಯಾಗಿರುವ ಮಾಂಝಿ ಅವರು ಹೊಸ ಸ್ಥಾನದ ಬಗ್ಗೆ ನಿರಾಕರಿಸಲೂ ಇಲ್ಲ ಅಥವಾ ಅದನ್ನು ದೃಢಪಡಿಸಲೂ ಇಲ್ಲ. ಆದರೆ ಯಾವುದೇ ಸಚಿವ ಸ್ಥಾನದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು