ಮಂಗಳವಾರ, ನವೆಂಬರ್ 24, 2020
26 °C

ಬಿಹಾರದಲ್ಲಿ ಬಿಜೆಪಿ ಏಳುಬೀಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ

ಬಿಹಾರದಲ್ಲಿ ಬಿಜೆಪಿಯು ಈವರೆಗೆ ಹಲವು ಏಳುಬೀಳುಗಳನ್ನು ನೋಡಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿಕೊಂಡರೆ, ಈ ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಸುಧಾರಿಸಿದೆ ಎಂದು ಹೇಳಬಹುದು. ಬಿಹಾರದಲ್ಲಿ ಬಿಜೆಪಿಯು ಒಂಟಿಯಾಗಿ ಚುನಾವಣೆಯನ್ನು ಎದುರಿಸಿದಾಗಲೆಲ್ಲಾ, ಕಡಿಮೆ ಸ್ಥಾನಗಳಲ್ಲಿ ಆರಿಸಿ ಬಂದಿದೆ. ಜೆಡಿಯು ಜತೆಗೆ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸಿದಾಗಲೆಲ್ಲಾ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 2020ರ ವಿಧಾನಸಭಾ ಚುನಾವಣೆಯಲ್ಲೂ ಇದೇ ಸ್ವರೂಪದ ಸಾಧನೆಯನ್ನು ಬಿಜೆಪಿ ನಿರೀಕ್ಷಿಸಿತ್ತು.

ಈವರೆಗಿನ ಎಲ್ಲಾ ಚುನಾವಣೆಗಳಲ್ಲಿನ ಮೈತ್ರಿಕೂಟದಲ್ಲಿ ಜೆಡಿಯು ಹಿರಿಯ ಪಕ್ಷದ ಸ್ಥಾನ ವಹಿಸಿದರೆ ಬಿಜೆಪಿ ಎರಡನೇ ಪಕ್ಷದ ಸ್ಥಾನದಲ್ಲಿ ಇರುತ್ತಿತ್ತು. ಆದರೆ 2020ರ ಚುನಾವಣೆಯಲ್ಲಿ ಈ ಪರಿಸ್ಥಿತಿ ಬದಲಾಗಿದೆ. ಎನ್‌ಡಿಎ ಮೈತ್ರಿಪಕ್ಷವಾದ ಜೆಡಿಯು, ಬಿಜೆಪಿಗಿಂತ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಈ ಹಿಂದೆ ಜೆಡಿಯು ಜತೆ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸಿದಾಗಲೂ ಬಿಜೆಪಿಯು, ಜೆಡಿಯುಗಿಂತ ಕೆಳಗೆ ಇತ್ತು. ಜೆಡಿಯು ಹೆಚ್ಚಿನ ಮತಗಳನ್ನು ಪಡೆದು, ಹೆಚ್ಚು ಕ್ಷೇತ್ರಗಳಲ್ಲಿ ಆರಿಸಿಬಂದಿತ್ತು. ಬಿಜೆಪಿ ಜೆಡಿಯುಗಿಂತ ಕಡಿಮೆ ಮತಗಳನ್ನು ಪಡೆಯುತ್ತಿತ್ತು ಮತ್ತು ಕಡಿಮೆ ಕ್ಷೇತ್ರಗಳಲ್ಲಿ ಆರಿಸಿಬಂದಿತ್ತು. ಆದರೆ ಈಗ ಜೆಡಿಯುವನ್ನೇ ಬಿಜೆಪಿ ಎರಡನೇ ಸ್ಥಾನಕ್ಕೆ ತಳ್ಳಿದೆ. ಬಿಹಾರದಲ್ಲಿ ಬಿಜೆಪಿಯ ನೆಲೆ ಗಟ್ಟಿಯಾಗುತ್ತಿರುವುದನ್ನು ಇದು ತೋರಿಸುತ್ತದೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೂ, ಹೆಚ್ಚು ಮತಗಳನ್ನು ಪಡೆದಿತ್ತು. 2010ಲ್ಲಿ ಬಿಜೆಪಿಯ ಮತ ಪ್ರಮಾಣ ಶೇ 16ರಷ್ಟು ಇತ್ತು. 2015ರಲ್ಲಿ ಇದು ಶೇ 24ರ ಗಡಿ ದಾಟಿತ್ತು. ಈ ಬಾರಿ ಮತ ಪ್ರಮಾಣ ಶೇ 19.3ಕ್ಕೆ ಕುಸಿದಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು