ಕರ್ನಾಟಕ ಸರ್ಕಾರದಿಂದ ಮರಾಠಿಗರಿಗೆ ತಾರತಮ್ಯ: ಮಹಾರಾಷ್ಟ್ರದ ಸಚಿವ

ಮುಂಬೈ: ‘ಛತ್ರಪತಿ ಶಿವಾಜಿಗೆ ಅಪಮಾನ ಮಾಡುವ ಕೃತ್ಯಕ್ಕೆ ಕ್ಷಮೆಯೇ ಇಲ್ಲ. ಕರ್ನಾಟಕ ಸರ್ಕಾರ ಅವರ ಪ್ರತಿಮೆಗೆ ಹೆಚ್ಚಿನ ಗೌರವ ನೀಡಬೇಕು’ ಎಂದು ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಪ್ರತಿಪಾದಿಸಿದ್ದಾರೆ.
ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದ ಬೆಂಗಳೂರು ಘಟನೆಯನ್ನು ಉಲ್ಲೇಖಿಸಿ ವಿಧಾನಪರಿಷತ್ತಿನಲ್ಲಿ ಹೇಳಿಕೆ ನೀಡಿದ ಅವರು, ಘಟನೆ ಖಂಡನಾರ್ಹ. ಕರ್ನಾಟಕ ಸರ್ಕಾರ ಎಂದಿಗೂ ಅಲ್ಲಿ ನೆಲೆಸಿರುವ ಮರಾಠಿಗರ ಬಗ್ಗೆ ತಾರತಮ್ಯ ನಿಲುವು ತಳೆದಿದೆ‘ ಎಂದು ಆರೋಪಿಸಿದರು.
‘ಪ್ರಧಾನ ಮಂತ್ರಿ ಮೋದಿ ಅವರೇ ಹಲವು ಬಾರಿ ಶಿವಾಜಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಕರ್ನಾಟಕ ಸರ್ಕಾರವು ಅವರಿಗೆ ಹೆಚ್ಚಿನ ಗೌರವ ನೀಡಬೇಕಾಗಿದೆ’ ಎಂದರು.
ಇದನ್ನೂ ಓದಿ– ರಾಜ್ಯದ ಮರಾಠರು ಅಪ್ಪಟ ಕನ್ನಡಿಗರು: ಠಾಕ್ರೆಗೆ ಪತ್ರ ಬರೆದ ಮರಾಠ ಮಹಾ ಒಕ್ಕೂಟ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.