ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಆರ್‌ಎಸ್‌ಎಸ್‌ನವರು 21ನೇ ಶತಮಾನದ ಕೌರವರು’ ಎಂದು ಜರಿದಿದ್ದಾರೆ.
‘ಹರಿಯಾಣ ಮಹಾಭಾರತದ ನೆಲ. ಕೌರವರು ಯಾರು? ಮೊದಲು ನಿಮಗೆ 21ನೇ ಶತಮಾನದ ಕೌರವರ ಬಗ್ಗೆ ಹೇಳುತ್ತೇನೆ. ಅವರು ಖಾಕಿ ಚೆಡ್ಡಿ ಧರಿಸುತ್ತಾರೆ. ಲಾಠಿ ಹಿಡಿಯುತ್ತಾರೆ, ಶಾಖೆ ನಡೆಸುತ್ತಾರೆ’ ಎಂದು ಹೇಳಿದರು.
ಭಾರತ್ ಜೋಡೊ ಯಾತ್ರೆಯು ಸೋಮವಾರ ಹರಿಯಾಣದ ಅಂಬಾಲಾ ಜಿಲ್ಲೆಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ನನಗೆ ವರ್ಚಸ್ಸಿನ ಹಂಗಿಲ್ಲ: ‘ನನಗೆ ವರ್ಚಸ್ಸಿನ ಹಂಗಿಲ್ಲ, ವರ್ಚಸ್ಸಿನ ಬಗ್ಗೆ ನಾನು ತಲೆಕೆಡಿಸಿಕೊಂಡಿಯೂ ಇಲ್ಲ. ಯಾತ್ರೆಯು ರಾಹುಲ್ ಗಾಂಧಿ ಬಗ್ಗೆ ಅಲ್ಲ. ಆತನನ್ನು ನಾನೇ ಕೊಂದುಕೊಂಡಿದ್ದೇನೆ’ ಎಂದರು.
‘ಯಾತ್ರೆಯು ನಿಮ್ಮಲ್ಲಿ ಪರಿವರ್ತನೆಗೆ ಕಾರಣವಾಗಿದೆಯೇ’ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ರಾಹುಲ್ ಹೀಗೆ ಪ್ರತಿಕ್ರಿಯಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.