ಮಂಗಳವಾರ, ಮಾರ್ಚ್ 28, 2023
23 °C

ಚಳಿಗಾಲ ಆರಂಭ: ಕೇದಾರನಾಥ, ಯಮುನೋತ್ರಿ ದೇಗುಲಗಳು ಬಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳಾದ ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಶನಿವಾರ ಮುಚ್ಚಲಾಯಿತು.

ವೇದ ಮಂತ್ರ ಘೋಷಗಳೊಂದಿಗೆ ಕೇದಾರನಾಥ ದೇವಾಲಯದ ಪ್ರವೇಶ ದ್ವಾರಗಳನ್ನು ಬೆಳಿಗ್ಗೆ 8 ಗಂಟೆಗೆ ಮತ್ತು ಯಮುನೋತ್ರಿ ದೇಗುಲದ ಪ್ರವೇಶ ದ್ವಾರಗಳನ್ನು ಮಧ್ಯಾಹ್ನ 12.15 ಕ್ಕೆ ಮುಚ್ಚಲಾಯಿತು ಎಂದು ಚಾರ್‌ಧಾಮ್‌ ದೇವಸ್ಥಾನ ಮಂಡಳಿಯ ಮಾಧ್ಯಮ ವಿಭಾಗ ತಿಳಿಸಿದೆ. 

ಈ ಸಂದರ್ಭದಲ್ಲಿ ಅಸಂಖ್ಯಾತ ಭಕ್ತರು ಎರಡೂ ದೇವಾಲಯಗಳಿಗೆ ಭೇಟಿ ನೀಡಿ, ಚಳಿಗಾಲದ ಅವಧಿಯಲ್ಲಿ ದೇವಾಲಯದ ಬಾಗಿಲು ಮುಚ್ಚುವ ಪ್ರಕ್ರಿಯೆಗೆ ಸಾಕ್ಷಿಯಾದರು.

ಓದಿ: 

ದೇವಾಲಯಗಳ ದ್ವಾರಗಳನ್ನು ಮುಚ್ಚಿದ ನಂತರ, ಬಾಬಾ ಕೇದಾರನಾಥ (ಶಿವ) ಮತ್ತು ಯಮುನಾ ದೇವತೆಯ ವಿಗ್ರಹಗಳನ್ನು ಪುಷ್ಪಾಲಂಕೃತ ಪಲ್ಲಕ್ಕಿಗಳಲ್ಲಿ ಉತ್ಸವದ ಮೂಲಕ ಕ್ರಮವಾಗಿ ಉಖಿಮಠ ಮತ್ತು ಖರ್‌ಸಾಲಿ ಸ್ಥಳಗಳಿಗೆ ಕರೆದೊಯ್ಯಲಾಯಿತು. ಈ ಎರಡು ವಿಗ್ರಹಗಳು ಒಂದೆರಡು ದಿನಗಳಲ್ಲಿ ನಿಗದಿತ ಸ್ಥಳವನ್ನು ತಲುಪಲಿವೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ತೀರ್ಥಯಾತ್ರೆ  ಆರಂಭವಾದಾಗಿನಿಂದ 4.50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು 'ಚಾರ್‌
ಧಾಮ್'ಗೆ ಭೇಟಿ ನೀಡಿದ್ದಾರೆ.

ಗಂಗೋತ್ರಿ ದೇಗುಲದ ಬಾಗಿಲನ್ನು ಶುಕ್ರವಾರ ಮುಚ್ಚಲಾಗಿದೆ. ಬದರಿನಾಥ ದೇವಾಲಯದ ದ್ವಾರವನ್ನು ಇದೇ ತಿಂಗಳ 20ರಂದು ಮುಚ್ಚಲಾಗುವುದು. ಅಲ್ಲಿಗೆ ಈ ವರ್ಷದ ಚಾರ್‌ಧಾಮ್ ಯಾತ್ರೆ ಮುಕ್ತಾಯವಾದಂತೆ ಆಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು