ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಲಾಲ್‌’ ವಿರುದ್ಧದ ಆಂದೋಲನ ಆರ್‌ಎಸ್‌ಎಸ್ ಹುನ್ನಾರ: ಸಿಪಿಎಂ ಆರೋಪ

Last Updated 23 ನವೆಂಬರ್ 2021, 2:23 IST
ಅಕ್ಷರ ಗಾತ್ರ

ತಿರುವನಂತಪುರ: ‘ಹಲಾಲ್’ ಆಹಾರ ಸಂಸ್ಕೃತಿಯ ವಿರುದ್ಧ ನಡೆಯುತ್ತಿರುವ ಅಭಿಯಾನವು ಜನರನ್ನು ತಪ್ಪುದಾರಿಗೆಳೆಯುವ, ರಾಜ್ಯದಲ್ಲಿ ಕೋಮುವಿಭಜನೆಯನ್ನು ಸೃಷ್ಟಿಸುವ ಆರ್‌ಎಸ್‌ಎಸ್‌ ಪ್ರಯತ್ನಗಳ ಭಾಗವಾಗಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಕೊಡಿಯೇರಿ ಬಾಲಕೃಷ್ಣ ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಕೂಡ ಹೋಟೆಲ್‌ಗಳಲ್ಲಿ ಹಲಾಲ್ ಆಹಾರದ ವಿರುದ್ಧ ಬಹಿರಂಗ ಕರೆ ನೀಡಿದ್ದರು. ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾರಿಯರ್ ಅವರು ಈ ಅಭಿಯಾನವನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದರು. ಆದರೆ, ನಂತರ ಅವರು ಅದನ್ನು ಹಿಂತೆಗೆದುಕೊಂಡರು.‌

ಕೇರಳದ ಹೋಟೆಲ್‌ ಗಳಲ್ಲಿ ‘ಹಲಾಲ್’ ನಾಮಫಲಕಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಆಹಾರ ಸಂಸ್ಕೃತಿಯ ವಿರುದ್ಧದ ಅಭಿಯಾನಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿರುವುದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT