ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ ಹೇಳಿಕೆ ಮೂಲಕ ಭೇಟಿಯನ್ನು ನೆನಪಿಸುತ್ತೇನೆ: ಕೇರಳ ಸಿಎಂಗೆ ಸ್ವಪ್ನಾ

Last Updated 15 ಜೂನ್ 2022, 5:08 IST
ಅಕ್ಷರ ಗಾತ್ರ

ತಿರುವನಂತಪುರ: ಯುಎಇ ರಾಯಭಾರ ಕಚೇರಿಯ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.

ಮುಖ್ಯಮಂತ್ರಿಯವರ ಕುಟುಂಬ ಸದಸ್ಯರೊಂದಿಗೆ ಅವರ ಕಚೇರಿಯಲ್ಲಿ ಕುಳಿತು ಹಲವು ವಿಷಯಗಳನ್ನು ಚರ್ಚಿಸಿ ಕಾರ್ಯಗತಗೊಳಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಆ ಸಭೆಗಳನ್ನು ಮರೆತಿದ್ದರೆ, ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳ ಮೂಲಕ ಅವರಿಗೆ ನೆನಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಾನು ನನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಮತ್ತು ನನ್ನ ಹೇಳಿಕೆಗಳಿಗೆ ಬದ್ಧಳಾಗಿದ್ದೇನೆ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ. ಎಲ್ಲಾ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164 ರ ಅಡಿ ನೀಡಿದ್ದ ಹೇಳಿಕೆಯಲ್ಲಿ, ಸ್ವಪ್ನಾ ಅವರು 2016ರಲ್ಲಿ ಯುಎಇ ಕಾನ್ಸುಲೇಟ್ ಅಧಿಕಾರಿಗಳು ಮುಖ್ಯಮಂತ್ರಿಗಳ ಕಚೇರಿಯಿಂದ ಬಂದಿದ್ದ ಕರೆನ್ಸಿ ಹೊಂದಿದ್ದ ಬ್ಯಾಗ್ ಅನ್ನು ಪತ್ತೆ ಮಾಡಿದ್ದರು. ಮುಖ್ಯಮಂತ್ರಿ ದುಬೈ ಪ್ರವಾಸದಲ್ಲಿದ್ದಾಗ ಅದನ್ನು ಸಾಗಿಸಲಾಗಿತ್ತು ಎಂದು ಆರೋಪಿಸಿದ್ದರು. ಬಿರಿಯಾನಿ ಹೊರತುಪಡಿಸಿ ಭಾರವಾದ ವಸ್ತುಗಳನ್ನು ಹೊಂದಿರುವಂತೆ ತೋರುತ್ತಿದ್ದ ಬಿರಿಯಾನಿ ಪಾತ್ರೆಗಳನ್ನು ಯುಎಇ ಕಾನ್ಸುಲ್ ಜನರಲ್ ಮನೆಯಿಂದ ಸಿಎಂ ನಿವಾಸಕ್ಕೆ ಆಗಾಗ್ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT