ಮಂಗಳವಾರ, ಜನವರಿ 31, 2023
27 °C

ಕೋಲ್ಕತ್ತದ ಶ್ಲೋಕ್‌ ಮುಖರ್ಜಿಗೆ ಗೂಗಲ್‌ ಡೂಡಲ್‌ ಪ್ರಶಸ್ತಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಗೂಗಲ್‌ ಸೋಮವಾರ 2022ರ ಡೂಡಲ್‌ ಫಾರ್‌ ಗೂಗಲ್‌ ಸ್ಪರ್ಧೆಯ ವಿಜೇತರನ್ನು ಘೋಷಿಸಿದೆ. ಈ ವರ್ಷ ಕೋಲ್ಕತ್ತದ ವಿದ್ಯಾರ್ಥಿ ಶ್ಲೋಕ್‌ ಮುಖರ್ಜಿ ‘ಇಂಡಿಯಾ ಆನ್‌ ದಿ ಸೆಂಟರ್‌ ಸ್ಟೇಜ್‌’ ಡೂಡಲ್‌ಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ಸೋಮವಾರ (ನ.14) 24 ಗಂಟೆಗಳ ಕಾಲ ಇವರ ಡೂಡಲ್‌ Google.co.in ನಲ್ಲಿ ಕಾಣಿಸಿಕೊಳ್ಳಲಿದೆ. ‘ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ ಮಾನವೀಯತೆಗಾಗಿ ಪರಿಸರ ಸ್ನೇಹಿ ರೊಬೋಟ್‌ಗಳನ್ನು ಅಭಿವೃದ್ಧಿಗೊಳಿಸುವ ವಿಜ್ಞಾನಿಗಳನ್ನು ಹೊಂದಲಿದೆ’ ಎಂಬ ಬರಹದೊಂದಿಗೆ ಶ್ಲೋಕ್‌ ತಮ್ಮ ಡೂಡಲ್‌ ಅನ್ನು ಹಂಚಿಕೊಂಡಿದ್ದಾರೆ. 

ಈ ವರ್ಷ 1–10ನೇ ತರಗತಿವರೆಗಿನ ಸುಮಾರು 115000 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ‘ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ’ ಎಂಬ ಧ್ಯೇಯವನ್ನು ಸ್ಪರ್ಧೆ ಹೊಂದಿತ್ತು. ಟಿಂಕಲ್‌ನ ಕಾಮಿಕ್ಸ್‌ನ ಮುಖ್ಯಸ್ಥೆ ನೀನಾ ಗುಪ್ತಾ ಸೇರಿದಂತೆ ಸಮಾಜದ ಕೆಲ ಗಣ್ಯರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. 

‘ಮಕ್ಕಳ ಕ್ರಿಯಾಶೀಲತೆ ಮತ್ತು ಪರಿಕಲ್ಪನೆ ಅಚ್ಚರಿ ಮೂಡಿಸಿದೆ. ಹಲವು ಡೂಡಲ್‌ಗಳಲ್ಲಿ ಮುಂಚೂಣಿ ತಂತ್ರಜ್ಞಾನ ಮತ್ತು ಸುಸ್ಥಿರತೆಗಳು ಸಾಮಾನ್ಯ ಧ್ಯೇಯವಾಗಿತ್ತು’ ಎಂದು ಗೂಗಲ್‌ ಹೇಳಿದೆ. 

ಅಂತಿಮ 20 ಡೂಡಲ್‌ಗಳನ್ನು ಸಾರ್ವಜನಿಕ ವೋಟಿಂಗ್‌ಗಾಗಿ ತೆರೆದಿಡಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು