ಗುರುವಾರ , ಮಾರ್ಚ್ 23, 2023
21 °C

ಕೋರೆಗಾಂವ್–ಭೀಮಾ ತನಿಖಾ ಆಯೋಗಕ್ಕೆ ಸೂಕ್ತ ಕಚೇರಿ ನೀಡುವಂತೆ ಸರ್ಕಾರಕ್ಕೆ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ‘ಸರ್ಕಾರ ತಮಗೆ ಸೂಕ್ತ ಕಚೇರಿ ವ್ಯವಸ್ಥೆ ಮಾಡುವವರೆಗೂ, ಭೀಮಾ – ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಿಗದಿಪಡಿಸಿರುವ ಎಲ್ಲ ವಿಚಾರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕೋರೆಗಾಂವ್–ಭೀಮಾ ವಿಚಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸ್ಮಾರಕವೊಂದರ ಬಳಿ ಜನವರಿ 2018 ರಂದು ನಡೆದ  ಹಿಂಸಾಚಾರದ ಕುರಿತು ಈ ಆಯೋಗ ತನಿಖೆ ನಡೆಸುತ್ತಿದೆ. ಇಬ್ಬರು ಸದಸ್ಯರನ್ನೊಳಗೊಂಡ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಜೆ.ಎನ್‌.ಪಟೇಲ್‌ ಮುಖ್ಯಸ್ಥರಾಗಿದ್ದಾರೆ.

ಈ ಕುರಿತು ಸೋಮವಾರ ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿರುವ ಆಯೋಗದ ವಕೀಲ ಆಶಿಶ್ ಸತ್ಪುತೆ, ‘ಪ್ರಸ್ತುತ ಈ ಸಮಿತಿಯು ಮುಂಬೈನಲ್ಲಿರುವ ರಾಜ್ಯ ಮಾಹಿತಿ ಆಯೋಗದ ಕಚೇರಿಯ ಆವರಣದಿಂದ ಕಾರ್ಯನಿರ್ವಹಿಸುತ್ತಿದೆ. ಈ ಸ್ಥಳ ಬಹಳ ಚಿಕ್ಕದಾಗಿದ್ದು, ಕೋವಿಡ್‌–19 ಮಾನದಂಡಗಳನ್ನು ಅನುಸರಿಸಲು ಕಷ್ಟವಾಗುತ್ತಿದೆ‘ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅ.31ರಂದು ಆಯೋಗದ ಕಾರ್ಯದರ್ಶಿ ವಿವಿ.ವಿ.ಪಳನಿತ್‌ಕರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ‘ಶೀಘ್ರದಲ್ಲೇ ಆಯೋಗಕ್ಕೆ ಮುಂಬೈನಲ್ಲಿ ಸೂಕ್ತ ಕಚೇರಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಅ.28ರಂದು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎನ್. ಪಟೇಲ್ ಅವರು,  ಆಯೋಗಕ್ಕೆ ಸೂಕ್ತ ಕಚೇರಿ ನೀಡಲು ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು