‘ಹಾರರ್’ ಸಿನಿಮಾಗಳ ಖ್ಯಾತಿಯ ಕುಮಾರ ರಾಮಸೆ ನಿಧನ
ಮುಂಬೈ: ‘ಹಾರರ್’ ಸಿನಿಮಾಗಳ ಖ್ಯಾತಿಯ ಕುಮಾರ್ ರಾಮಸೆ (85) ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ನಿರ್ಮಾಪಕ ಎಫ್‌ಯು ರಾಮಸೆ ಅವರ ಪುತ್ರರಾಗಿದ್ದ ಕುಮಾರ್ ಅವರು, ಏಳು ಮಕ್ಕಳಲ್ಲಿ ಹಿರಿಯರಾಗಿದ್ದರು. ಉಳಿದ ಸಹೋದರರಾದ ಕೇಶು, ತುಳಸಿ, ಕರಣ್, ಶ್ಯಾಮ್, ಗಂಗು ಮತ್ತು ಅರ್ಜುನ್ ಅವರ ಜತೆ ಸೇರಿ 70 ಮತ್ತು 80ರ ದಶಕದಲ್ಲಿ ಕಡಿಮೆ ವೆಚ್ಚದಲ್ಲಿ ‘ಹಾರರ್’ ಸಿನಿಮಾಗಳನ್ನು ತಯಾರಿಸಿದ್ದರು.
‘ಪುರಾಣ ಮಂದಿರ’ (1984), ‘ಸಾಯಾ’ (1989) ಮತ್ತು ಸೂಪರ್ ಹಿಟ್ ಚಲನಚಿತ್ರ ಖೋಜ್ (1989) ಸೇರಿದಂತೆ ಹಲವು ಚಲನಚಿತ್ರಗಳಿಗೆ ಕುಮಾರ್ ಅವರು ಚಿತ್ರ ಸಾಹಿತ್ಯ ರಚಿಸಿದ್ದರು.
1979ರಲ್ಲಿ ‘ಔರ್ ಕೌನ್’ ಮತ್ತು 1981ರಲ್ಲಿ ’ದಹ್‌ಶಾತ್’ ಚಲನಚಿತ್ರಗಳನ್ನು ನಿರ್ಮಿಸಿದ್ದರು.
ಕುಮಾರ್ ಅವರಿಗೆ ಪತ್ನಿ ಶೀಲಾ ಮತ್ತು ಮೂವರು ಪುತ್ರರು ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.