ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಹಚ್ಚಿ ಶಿಕ್ಷಕಿಯನ್ನು ಕೊಲೆ ಮಾಡಿದ್ದ ಪ್ರಕರಣ: ವ್ಯಕ್ತಿಗೆ ಜೀವಾವಧಿ ಶಿಕ್ಷೆ

Last Updated 11 ಫೆಬ್ರುವರಿ 2022, 2:46 IST
ಅಕ್ಷರ ಗಾತ್ರ

ಮುಂಬೈ:ಎರಡು ವರ್ಷಗಳ ಹಿಂದೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಶಿಕ್ಷಕಿಯನ್ನು ಕೊಂದಿದ್ದ ವ್ಯಕ್ತಿಗೆ ಇಲ್ಲಿನ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಭಗ್ನ ಪ್ರೇಮಿ ವಿಕ್ಕಿ ನಾಗ್ರಾಳೆ 2020ರ ಫೆಬ್ರುವರಿ 3ರಂದುವಾರ್ಧಾ ಜಿಲ್ಲೆಯ ಹಿಂಗನ್‌ಘಾಟ್‌ನಲ್ಲಿ ಶಿಕ್ಷಕಿ ಅಂಕಿತಾ ಪಿಸ್ಸುಡೆ ಅವರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಶೇ 40ರಷ್ಟು ಸುಟ್ಟಗಾಯಗಳೊಂದಿಗೆ ಒಂದು ವಾರ ಆಸ್ಪತ್ರೆಯಲ್ಲಿ ನರಳಿದ್ದ ಸಂತ್ರಸ್ತೆ ಕೊನೆಯುಸಿರು ಎಳೆದಿದ್ದರು.

ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ನಂತರ ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರ್ಕಾರವು ಆಂಧ್ರಪ್ರದೇಶದ ದಿಶಾ ಕಾನೂನಿನ ರೀತಿಯಲ್ಲಿ ಶಕ್ತಿ ಕಾನೂನನ್ನು ತರುವ ಪ್ರಕ್ರಿಯೆಯನ್ನು ವೇಗಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT