ಜಾಜ್‌ಪುರ: ಮೃತ ಕೋತಿಯ ಅಂತಿಮ ಸಂಸ್ಕಾರವನ್ನು ಪೊಲೀಸ್ ಅಧಿಕಾರಿಗಳು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
‘ಬಲಿಚಂದ್ರಾಪುರ ಪೊಲೀಸ್ ಠಾಣೆಯ ಆವರಣದಲ್ಲಿರುವ ಮರದಲ್ಲಿ ಕೋತಿ ವಾಸವಾಗಿತ್ತು. ಅದರೊಂದಿಗೆ ಠಾಣೆಯ ಸಿಬ್ಬಂದಿ ಆತ್ಮೀಯತೆ ಹೊಂದಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಮಂಗನಿಗೆ ವಯಸ್ಸಾಗಿತ್ತು ಮತ್ತು ಅನಾರೋಗ್ಯದಿಂದ ಬಳಲುತ್ತಿತ್ತು. ಮಂಗಳವಾರ ಅದರ ಮೃತದೇಹ ಸಿಕ್ಕಿದೆ. ನಮ್ಮ ಠಾಣೆಯ ಸಿಬ್ಬಂದಿಯು ಅದರೊಂದಿಗೆ ಆತ್ಮೀಯತೆ ಹೊಂದಿದ್ದರು. ಅದು ನಮ್ಮ ಕುಟುಂಬದ ಭಾಗವಾಗಿತ್ತು. ಅದರ ಸಾವಿನಿಂದ ನಮಗೆ ಆಘಾತವಾಗಿದೆ. ಹಾಗಾಗಿ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬದಲು ನಾವೇ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಿದೆವು’ ಎಂದು ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಬಿಜಯಿನಿ ಮಲ್ಹಾ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.