ಶನಿವಾರ, ಜೂನ್ 19, 2021
28 °C

ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳು ಸ್ಥಳೀಯರಿಗೆ ಮಾತ್ರ: ಶಿವರಾಜ್ ಚೌಹಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shivraj Chauhan

ಭೋಪಾಲ್: ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳು ಅಲ್ಲಿನ ಸ್ಥಳೀಯರಿಗೆ ಮಾತ್ರ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ  ಘೋಷಿಸಿದ್ದಾರೆ.

ಮಧ್ಯಪ್ರದೇಶ ಸರ್ಕಾರ ಇವತ್ತು ಮುಖ್ಯ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ರಾಜ್ಯದ ಯುವಜನಾಂಗಕ್ಕೆ ಮಾತ್ರ ಸರ್ಕಾರಿ ಕೆಲಸ ನೀಡುವಂತೆ ಮಾಡಲು ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಮಧ್ಯಪ್ರದೇಶದ ಸಂಪನ್ಮೂಲಗಳು ಇಲ್ಲಿನ ಮಕ್ಕಳಿಗಾಗಿ ಮಾತ್ರ ಎಂದು ಶಿವರಾಜ್ ಚೌಹಾಣ್ ವಿಡಿಯೊ ಸಂದೇಶದಲ್ಲಿ  ಹೇಳಿದ್ದಾರೆ.

ಸರ್ಕಾರಿ ಕೆಲಸ ನೀಡುವಾಗ ಮಧ್ಯಪ್ರದೇಶದವರಿಗೆ ಆದ್ಯತೆ ನೀಡಲಾಗುವುದು. ಹತ್ತು ಮತ್ತು ಹನ್ನೆರಡನೇ ತರಗತಿಯ ಅಂಕಗಳನ್ನು ಆಧರಿಸಿ ಸ್ಥಳೀಯ ಯುವಕರಿಗೆ ನೌಕರಿ ನೀಡುವ ಕ್ರಮ ಆರಂಭಿಸಲಾಗುವುದು ಎಂದು ಚೌಹಾಣ್ ಈ ಹಿಂದೆ ಹೇಳಿದ್ದರು.

ಮಧ್ಯಪ್ರದೇಶದ  ಯುವಕರಿಗೆ ಸರ್ಕಾರಿ ನೌಕರಿಯಲ್ಲಿ ಆದ್ಯತೆ ನೀಡಲಾಗುವುದು. ಉದ್ಯೋಗವಕಾಶಗಳು ಕಡಿಮೆಯಾಗುತ್ತಿರುವ ಹೊತ್ತಲ್ಲಿ ನಮ್ಮ ಯುವಕರ ಬಗ್ಗೆ ಕಾಳಜಿ ವಹಿಸಬೇಕಾದುದು ನಮ್ಮ ಕರ್ತವ್ಯ ಎಂದು ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಚೌಹಾಣ್ ಹೇಳಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು