ಮಂಗಳವಾರ, ಜನವರಿ 26, 2021
16 °C

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: 7 ಮಂದಿಯ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಈ ಘಟನೆ ನಾಸಿಕ್‌ ರಸ್ತೆ ಬಳಿ ಶನಿವಾರ ನಡೆದಿದೆ. ಬಾಲಕಿಯ ಪೋಷಕರು ಕೆಲಸದಿಂದ ಮನೆಗೆ ವಾಪಾಸು ಬಂದಾಗ ಮಗಳು ಮನೆಯಲ್ಲಿ ಇರಲಿಲ್ಲ. ಬಳಿಕ ಆಕೆಗೆ ಹುಡುಕಾಟ ನಡೆಸುತ್ತಿರುವಾಗ ಸಮೀಪದ ಕಟ್ಟಡವೊಂದರ ಟೆರೇಸ್‌ ಮೇಲೆ ಆಕೆ ಅಳುತ್ತಾ ಕೂತಿದ್ದಳು. ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ  ಎಂದು  ಪೊಲೀಸ್‌  ಅಧಿಕಾರಿಗಳು ಮಾಹಿತಿ ನೀಡಿದರು.

‘ ಪ್ರಕರಣ ಸಂಬಂಧ ಬಾಲಕ ಸೇರಿ 19 ರಿಂದ 29 ವರ್ಷದ ಐವರು ಯುವಕರು ಮತ್ತು ಅವರಿಗೆ ಸಹಾಯ ಮಾಡಿದ ಮಹಿಳೆಯೊಬ್ಬಳನ್ನು ಭಾನುವಾರ ಬಂಧಿಸಲಾಗಿದೆ. ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು