ಶುಕ್ರವಾರ, ಡಿಸೆಂಬರ್ 4, 2020
22 °C

ನಷ್ಟದಲ್ಲಿರುವ ಎಂಎಸ್‌ಆರ್‌ಟಿಸಿಗೆ ₹1,000 ಕೋಟಿ ಪ್ಯಾಕೆಜ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ನಷ್ಟದಲ್ಲಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಎಂಎಸ್‌ಆರ್‌ಟಿಸಿ) ಮುಂದಿನ ಆರು ತಿಂಗಳಿಗೆ ಒಟ್ಟು ₹1,000 ಕೋಟಿ ಆರ್ಥಿಕ ಸಹಾಯದ ಪ್ಯಾಕೆಜ್‌ ಅನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಘೋಷಿಸಿದೆ.

‘ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜೊತೆ ಚರ್ಚೆ ನಡೆಸಿದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಈ ಪ್ಯಾಕೆಜ್‌ ಘೋಷಿಸಿದ್ದಾರೆ. ಈ ಪ್ಯಾಕೆಜ್‌ ಮುಂದಿನ ಆರು ತಿಂಗಳು ಸಿಬ್ಬಂದಿಯ ವೇತನ ಹಾಗೂ ಎಂಎಸ್‌ಆರ್‌ಟಿಸಿಯ ಇಂಧನದ ಖರ್ಚಿಗೆ ನೆರವಾಗಲಿದೆ’ ಎಂದು ಸಾರಿಗೆ ಸಚಿವ ಅನಿಲ್‌ ಪರಬ್‌ ತಿಳಿಸಿದರು. ‌

‘ಕೋವಿಡ್‌–19 ಲಾಕ್‌ಡೌನ್‌ ಕಾರಣದಿಂದಾಗಿ ಎಂಎಸ್‌ಆರ್‌ಟಿಸಿಗೆ ₹3 ಸಾವಿರ ಕೋಟಿ ನಷ್ಟವಾಗಿತ್ತು. ಇದರಿಂದಾಗಿ ಸಿಬ್ಬಂದಿಯ ವೇತನವನ್ನೂ ನೀಡುವುದು ಕಷ್ಟವಾಗಿತ್ತು. ಪ್ರಸ್ತುತ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ನಿಗಮವೂ ಮತ್ತೆ ಹಳಿಗೆ ಬರಲಿದೆ. ದೀಪಾವಳಿ ಮುಂಚಿತವಾಗಿ ಬಾಕಿ ಇರುವ ಎಲ್ಲ ವೇತನವನ್ನು ನೌಕರರಿಗೆ ನೀಡಲಾಗುವುದು’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು