ಶನಿವಾರ, ಜನವರಿ 16, 2021
17 °C

ಮಹಾರಾಷ್ಟ್ರದ ಪರ್ಭಾನಿಯಲ್ಲಿ ಎರಡು ದಿನಗಳಲ್ಲಿ 900 ಕೋಳಿಗಳು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಬಾದ್‌: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮುರುಂಬ ಗ್ರಾಮದ ಕೋಳಿ ಫಾರ್ಮ್‌ವೊಂದರಲ್ಲಿ 900 ಕೋಳಿಗಳು ಮೃತಪಟ್ಟಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಮುರುಂಬ ಗ್ರಾಮದ ಕೋಳಿ ಫಾರ್ಮ್‌ನಲ್ಲಿ 8000 ಕೋಳಿಗಳಿವೆ. ಸತತ ಎರಡು ದಿನಗಳಲ್ಲಿ 900 ಕೋಳಿಗಳು ಸಾವಿಗೀಡಾಗಿವೆ. ಮೃತ ಕೋಳಿಗಳ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಈ ಕೋಳಿ ಫಾರ್ಮ್‌ ಅನ್ನು ಸ್ವ ಸಹಾಯ ಸಂಘವೊಂದು ನಡೆಸುತ್ತಿದೆ ಎಂದು ಪರ್ಭಾನಿ ಜಿಲ್ಲಾಧಿಕಾರಿ ದೀಪಕ್‌ ಮುಲ್ಜಿಕರ್ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು