ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳಾಸಾಹೇಬರ ಶಿವ ಸೈನಿಕ ಸಿಎಂ ಆಗಿದ್ದಕ್ಕೆ ಇಡೀ ಮಹಾರಾಷ್ಟ್ರಕ್ಕೆ ಸಂತಸ: ಶಿಂಧೆ

Last Updated 1 ಜುಲೈ 2022, 3:23 IST
ಅಕ್ಷರ ಗಾತ್ರ

ಪಣಜಿ: ಬಾಳಾಸಾಹೇಬ್‌ ಠಾಕ್ರೆ ಅವರ ಶಿವ ಸೈನಿಕನೊಬ್ಬ ಮುಖ್ಯಮಂತ್ರಿಯಾಗಿದ್ದು ಕೇವಲ ವಿಧಾನಸಭೆಯ ನನ್ನ ಸಹವರ್ತಿಗಳಿಗೆ ಮಾತ್ರವಲ್ಲ, ಇಡೀ ಮಹಾರಾಷ್ಟ್ರಕ್ಕೆ ಸಂತಸವಾಗಿದೆ ಎಂದು ಶಿವಸೇನಾ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.

ಗೋವಾದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಿಂಧೆ, ವಿಶ್ವಾಸ ತುಂಬಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದವನ್ನು ತಿಳಿಸಿದರು. ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಗೋವಾಗೆ ಮರಳಿದ ಶಿಂಧೆ ಅವರು ಉದ್ಧವ್‌ ಠಾಕ್ರೆ ವಿರುದ್ಧ ತನ್ನ ಜೊತೆ ಬಂಡಾಯ ಎದ್ದಿದ್ದ ಶಾಸಕರನ್ನು ಭೇಟಿ ಮಾಡಿದರು.

ನನ್ನನ್ನು ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರ ಈ ದಿನವನ್ನು ಕಾಣುತ್ತಿರುವುದಕ್ಕೆ ಜೊತೆಗೆ ನಿಂತ 50 ಶಾಸಕರು ಕಾರಣ. ಮಹಾರಾಷ್ಟ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಬಾಳಾಸಾಹೇಬ್‌ ಠಾಕ್ರೆ ಅವರ ದೂರದೃಷ್ಟಿಯನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ಶಿಂಧೆ ಹೇಳಿದರು.

ದೇವೇಂದ್ರ ಫಡಣವೀಸ್‌ ಅವರು ನನಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಹೃದಯ ವೈಶಾಲ್ಯವನ್ನು ಮೆರೆದಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT