ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಣೆ

Last Updated 8 ಡಿಸೆಂಬರ್ 2022, 13:50 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ–ಮಹಾರಾಷ್ಟ್ರ ನಡುವಣ ಗಡಿ ವಿವಾದ ವಿಷಯವು ಗುರುವಾರ ರಾಜ್ಯಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಈ ವಿಷಯದ ಚರ್ಚೆಗೆ ಅಧ್ಯಕ್ಷರು ಅವಕಾಶವನ್ನು ನೀಡಲಿಲ್ಲ.

ಸಭಾಪತಿ ಜಗದೀಪ್‌ ಧನ್‌ಕರ್ ಅವರು, ‘ಗಡಿ ವಿಷಯದ ಚರ್ಚೆಗೆ ಅವಕಾಶ ಕೋರಿ ನಿಯಮ 267ರ ಅಡಿ ನನಗೆ ನೋಟಿಸ್ ಬಂದಿದೆ. ಅದು ಸಮರ್ಪಕವಾಗಿಲ್ಲದ್ದರಿಂದ ಚರ್ಚೆಗೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

ದಿನದ ನಿಗದಿತ ಕಲಾಪವನ್ನು ಬದಿಗೊತ್ತಿ ಆದ್ಯತೆ ಮೇರೆಗೆ ಉಲ್ಲೇಖಿತ ವಿಷಯದ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ನಿಯಮ 267ರಡಿ ಅರ್ಜಿ ಸಲ್ಲಿಸಲಾಗುತ್ತದೆ.

ನೋಟಿಸ್ ಸಲ್ಲಿಸಿದ್ದ ಶಿವಸೇನೆಯ (ಉದ್ಧವ್‌ ಠಾಕ್ರೆ ಬಣ) ಪ್ರಿಯಾಂಕಾ ಚತುರ್ವೇದಿ ಅವರು, ‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿಷಯ ಮುಖ್ಯವಾದುದು. ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು‘ ಎಂದು ಪ್ರತಿಪಾದಿಸಿದರು.

‘ಉಲ್ಲೇಖಿತ ನಿಯಮದಡಿ ಚರ್ಚೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕಾಣಿಸುತ್ತಿಲ್ಲ. ನಿಯಮಾನುಸಾರ ನೋಟಿಸ್‌ ನೀಡಿ. ಬಳಿಕ ಪರಿಗಣಿಸೋಣ. ವ್ಯವಸ್ಥಿತವಾಗಿ ಚರ್ಚೆಯಾಗಲಿ’ ಎಂದು ಸಭಾಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT