ಸೋಮವಾರ, ಸೆಪ್ಟೆಂಬರ್ 26, 2022
24 °C

ಮಹಾರಾಷ್ಟ್ರ: ಹಳಿ ತಪ್ಪಿದ ಪ್ರಯಾಣಿಕ ರೈಲು; 50ಕ್ಕೂ ಹೆಚ್ಚು ಮಂದಿ ಗಾಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ಗೊಂದಿಯಾದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಬಳಿಕ ಪ್ರಯಾಣಿಕ ರೈಲು ಹಳಿ ತಪ್ಪಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ತಡರಾತ್ರಿ 2.30ರ ವೇಳೆಗೆ ಘಟನೆ ಸಂಭವಿಸಿದ್ದು, ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 

ಪ್ರಯಾಣಿಕ ರೈಲು ಛತ್ತೀಸಗಢದ ಬಿಸಾಲ್‌ಪುರದಿಂದ ರಾಜಸ್ಥಾನಕ್ಕೆ ಜೋಧಪುರಕ್ಕೆ ಸಂಚರಿಸುತ್ತಿತ್ತು.

ಮೂಲಗಳ ಪ್ರಕಾರ, ಸಿಗ್ನಲ್ ಸಮಸ್ಯೆಯಿಂದ ಅವಘಡ ಸಂಭವಿಸಿದೆ. ಪ್ರಯಾಣಿಕ ರೈಲಿನ ಚಾಲಕ ತುರ್ತು ಬ್ರೇಕ್ ಹಾಕಲು ಶ್ರಮಿಸಿದರೂ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು