ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪದರ್ಶಿ ಹತ್ಯೆ: ಆರೋಪಿ ವಶ ಪಡೆಯಲು ಪ್ರಾಗ್‌ಗೆ ತೆರಳಿದ ಮಹಾರಾಷ್ಟ್ರ ಪೊಲೀಸ್

2003ರಲ್ಲಿ ನಡೆದ ಹತ್ಯೆ ಪ್ರಕರಣ
Last Updated 23 ಮೇ 2022, 10:52 IST
ಅಕ್ಷರ ಗಾತ್ರ

ಠಾಣೆ: 2003ರಲ್ಲಿ ನಡೆದ ಅಮೆರಿಕ ರೂಪದರ್ಶಿ ಹತ್ಯೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆಯಲು ಮಹಾರಾಷ್ಟ್ರ ಪೊಲೀಸರು ಜೆಕ್‌ ಗಣರಾಜ್ಯದ ಪ್ರಾಗ್‌ ನಗರಕ್ಕೆ ತೆರಳಿದ್ದಾರೆ.

ಈ ಕುರಿತುಸೋಮವಾರ ಮಾಹಿತಿ ನೀಡಿದ ಅಧಿಕಾರಿಗಳು, 2003ರಲ್ಲಿ ನಡೆದ ಅಮೆರಿಕ ರೂಪದರ್ಶಿ ಲಿಯೋನಾ ಸ್ವಿಂಡರ್‌ಸ್ಕಿ (33) ಕೊಲೆ ಪ್ರಕರಣದಲ್ಲಿ ಆರೋಪಿಗಳಾದಪ್ರಾಣೇಶ್ ದೇಸಾಯಿ ಮತ್ತು ಈತನ ಸ್ನೇಹಿತ ವಿಪುಲ್‌ ಪಟೇಲ್‌ ಅವರನ್ನು ಠಾಣೆ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆಗೆ ಆರೋಪಿಗಳು ಪದೇ ಪದೇ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. ಹೀಗಾಗಿ ಸದ್ಯ ಪ್ರಾಗ್‌ನಲ್ಲಿ ನೆಲೆಸಿರುವ ಆರೋಪಿ ವಿಪುಲ್‌ ಪಟೇಲ್‌ ವಶಕ್ಕೆ ಪಡೆಯಲು ಉಪ ಪೊಲೀಸ್‌ ಮಹಾನಿರ್ದೇಶಕ ನೇತೃತ್ವದ ತಂಡ ಶನಿವಾರ ಪ್ರಾಗ್‌ ನಗರಕ್ಕೆ ತೆರಳಿದೆ ಎಂದು ತಿಳಿಸಿದ್ದಾರೆ.

ದೇಸಾಯಿ ಮತ್ತು ಸ್ವಿಂಡರ್‌ಸ್ಕಿ ಮೇ 2003ರಲ್ಲಿ ವಿವಾಹವಾಗಿ ಮುಂಬೈಗೆ ಬಂದಿದ್ದರು. ಕೆಲವೇ ದಿನಗಳಲ್ಲಿ ಸ್ವಿಂಡರ್‌ಸ್ಕಿ ನಾಪತ್ತೆಯಾಗಿದ್ದರು. ಬಳಿಕ ಠಾಣೆ ಜಿಲ್ಲೆಯ ಕಾಶಿಮಿರಾ ಪ್ರದೇಶದ ಹೆದ್ದಾರಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಹೆಸರಲ್ಲಿ ಲಕ್ಷಾಂತರ ಮೌಲ್ಯದ ವಿಮೆ ಹಣ ಪಡೆಯಲು ದೇಸಾಯಿಯೇ ಸ್ನೇಹಿತನ ಜೊತೆಗೂಡಿ ಕೊಲೆ ಮಾಡಿದ್ದಾಗಿ ಪೊಲೀಸರು ಆರೋಪಿಸಿದ್ದರು.

ಪ್ರಕರಣ ಸಂಬಂಧ ಈ ವರ್ಷ ಆರಂಭದಲ್ಲಿ ಗುಜರಾತ್‌ನ ವಡೋದರದಲ್ಲಿ ದೇಸಾಯಿಯನ್ನು ಬಂಧಿಸಿದ್ದರು. ಇನ್ನೊಬ್ಬ ಆರೋಪಿ ಪಟೇಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT