ಭಾನುವಾರ, ಮೇ 29, 2022
30 °C

ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಕೋವಿಡ್:‌ ಶೀಘ್ರ ಚೇತರಿಕೆಗೆ ಹಾರೈಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೊಲಿ ಅವರಿಗೆ ಕೋವಿಡ್-‌19 ದೃಢಪಟ್ಟಿದೆ. ಇಬ್ರಾಹಿಂ ಅವರು ಚುನಾವಣಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ, ಮನೆಯಲ್ಲಿಯೇ ಉಳಿದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಬ್ರಾಹಿಂ ಅವರು ಶೀಘ್ರ ಗುಣಮುಖರಾಗಲಿ. ಭಾರತವು ಕೋವಿಡ್‌ ಸಂದರ್ಭದಲ್ಲಿ ಸದಾ ಮಾಲ್ಡೀವ್ಸ್‌ ಜೊತೆಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಭಾರತವು 3.12 ಲಕ್ಷ ಡೋಸ್‌ ಲಸಿಕೆಯನ್ನು ಮಾಲ್ಡೀವ್ಸ್‌ಗೆ ಪೂರೈಕೆ ಮಾಡಿದೆ.

'ನಿಮ್ಮ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಶಿಸುತ್ತೇನೆ. ನಮ್ಮ ಶುಭ ಹಾರೈಕೆಗಳು ನಿಮ್ಮೊಂದಿಗಿರಲಿವೆ ಮತ್ತು ಮಾಲ್ಡೀವ್ಸ್‌ ಜನರು ಕೋವಿಡ್‌ ಸವಾಲನ್ನು ಯಶಸ್ವಿಯಾಗಿ ಮೀರಲಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಭಾರತವು ಪೂರ್ಣ ಬೆಂಬಲ ಮುಂದುವರಿಸಲಿದ್ದಾರೆ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

 

ಮಾಲ್ಡೀವ್ಸ್‌ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಅವರು ಆ ದೇಶದ ಸಚಿವ ಅಬ್ದುಲ್ಲಾ ಶಾಹಿದ್‌ ಅವರೊಂದಿಗೆ ಹೊಸ ವರ್ಷದಂದು ಮಾತುಕತೆ ನಡೆಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು