ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಬ್ಯಾನರ್ಜಿ ದೇವರ ಸಮಾನ, ನಾವು ಅವರನ್ನು ಪೂಜಿಸುತ್ತೇವೆ: ಬಂಗಾಳ ಸಚಿವ

Last Updated 27 ಮಾರ್ಚ್ 2023, 4:07 IST
ಅಕ್ಷರ ಗಾತ್ರ

ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರು ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಕೃಷಿ ಸಚಿವ ಸೊಭಾನ್‌ದೇಬ್‌ ಚಟ್ಟೊಪಾಧ್ಯಾಯ ಹೇಳಿದ್ದಾರೆ.

ಭಾನುವಾರ 24 ಉತ್ತರ ಪರಗಣ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರನ್ನು ನಾವು ಪೂಜಿಸುತ್ತೇವೆ. ದೇವರಿಗೆ ಪೂಜೆ ಸಲ್ಲಿಸುವ ಪೂಜೆ ಸಲ್ಲಿಸುವ ಪುರೋಹಿತರು ಕೆಲವೊಮ್ಮೆ ಕಳ್ಳರಾಗಬಹುದು. ಆದರೆ ದೇವರು ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

‘ಕೆಲವೊಮ್ಮೆ ನಾನು ಕಳ್ಳನಾದರೂ ಮಮತಾ ಬ್ಯಾನರ್ಜಿ ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

ಸಿಪಿಎಂ ಆಡಳಿತ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಅಕ್ರಮಗಳು ನಡೆದಿದೆ ಎಂದು ಇದೇ ವೇಳೆ ಅವರು ಆರೋಪಿಸಿದರು. ಎಡಪಕ್ಷಗಳ ಆಡಳಿತದ ವೇಳೆ ಒಬ್ಬನನ್ನು ರಿಜಿಸ್ಟ್ರಾರ್‌ ಆಗಿ ನೇಮಕ ಮಾಡಿದ್ದರು, ಆದರೆ ಅವರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 50ರಷ್ಟು ಅಂಕ ಕೂಡ ಇರಲಿಲ್ಲ ಎಂದು ಚಟ್ಟೊಪಾಧ್ಯಾಯ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT