ಗುರುವಾರ , ನವೆಂಬರ್ 26, 2020
21 °C
ಮದುವೆಯಾಗುವುದಾಗಿ ₹ 23 ಲಕ್ಷ ವಂಚಿಸಿದ ದಾವಣಗೆರೆ ಯುವಕ

ಹೆಣ್ಣಿನ ರೀತಿ ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿ ವಂಚನೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಫೇಸ್‌ಬುಕ್‌ನಲ್ಲಿ ಹೆಣ್ಣೆಂದು ಪರಿಚಯಿಸಿಕೊಂಡು, ಗೋವಾದ ನಿವಾಸಿಯನ್ನು ಮದುವೆಯಾಗುವುದಾಗಿ ನಂಬಿಸಿ ₹ 23.21ಲಕ್ಷ ವಂಚಿಸಿದ ದಾವಣಗೆರೆಯ ಯುವಕನನ್ನು ಗೋವಾದ ಸೈಬರ್ ಪೊಲೀಸ್‌ ತಂಡ ಬಂಧಿಸಿದೆ.

ದಾವಣಗೆರೆಯ ಸ್ವಪ್ನಿಲ್ ನಾಯ್ಕ ಬಂಧಿತ ಆರೋಪಿ. ಕರ್ನಾಟಕದ ಪೊಲೀಸರ ಸಹಾಯದಿಂದ ಆರೋಪಿ ಸ್ವಪ್ನಿಲ್ ಮೊಬೈಲ್ ಲೋಕೇಷನ್ ಆಧರಿಸಿ ಗೋವಾ ಪೊಲೀಸರು ಶನಿವಾರ ದಾವಣಗೆರೆಯಲ್ಲಿ ಈತನನ್ನು ಬಂಧಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಹೆಣ್ಣಾಗಿ ಚಿತ್ರಿಸಿಕೊಂಡಿದ್ದ ಈತ ಮುಗ್ಧ ವ್ಯಕ್ತಿಗಳನ್ನು ತನ್ನ ಬಲೆಗೆ ಬೀಳಿಸಿಕೊಂಡು, ಅವರಿಂದ ಹಣ ಪಡೆದು ವಂಚಿಸುತ್ತಿದ್ದ’ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

‘ತನ್ನ ತಪ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಆರೋಪಿ, ವಂಚನೆಗೊಳಗಾದವರಿಗೆ ಹಣ ವಾಪಸ್ ನೀಡುವುದಾಗಿ ತಿಳಿಸಿದ್ದಾನೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಆರೋಪಿ ಅನೇಕರಿಗೆ ವಂಚಿಸಿದ್ದಾನೆ. ಒಮ್ಮೆ ಪರಿಚಯಿಸಿಕೊಂಡ ವ್ಯಕ್ತಿಗಳಿಂದ ಅವರ ವೈಯಕ್ತಿಕ ವಿವರ ಪಡೆಯುತ್ತಿದ್ದ ಆರೋಪಿ, ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಸ, ವಂಚನೆಗೆ ಸಂಬಂಧಿಸಿದಂತೆ ಸ್ವಪ್ನಿಲ್ ನಾಯ್ಕ್ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು