ಭಾನುವಾರ, ಜೂನ್ 13, 2021
21 °C

ನೀರಿನ ಮೋಟಾರ್ ಕದಿಯಲು ಪ್ರಯತ್ನಿಸಿದ್ದಕ್ಕೆ ಥಳಿತ: ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:‘ನೀರಿನ ಮೋಟಾರ್‌ ಕದಿಯಲು ಯತ್ನಿಸಿದ 22 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ, ಹತ್ಯೆಗೈದಿರುವ ಘಟನೆ ವಾಯವ್ಯ ದೆಹಲಿಯ ಅಮನ್ ವಿಹಾರದಲ್ಲಿ ನಡೆದಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.

‘ಸಂತ್ರಸ್ತನನ್ನು ಪ್ರೇಮ್‌ ನಗರದ ನಿವಾಸಿ ಸಲ್ಮಾನ್‌ ಎಂದು ಗುರುತಿಸಲಾಗಿದೆ’ ಎಂದು ಅವರು ಹೇಳಿದರು.

‘ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಸಲ್ಮಾನ್‌ ಹೋತಿಲಾಲ್‌ ಎಂಬುವವರ ಅಂಗಡಿಗೆ ತೆರಳಿದ್ದ. ಈ ವೇಳೆ ಅಂಗಡಿಯಿಂದ ನೀರಿನ ಮೋಟಾರ್‌ ಅನ್ನು ಕದಿಯಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ಹೋತಿಲಾಲ್‌, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿದ ಸಲ್ಮಾನ್‌ನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈ ಸಂಬಂಧ ಹೋತಿಲಾಲ್‌ನನ್ನು ಬಂಧಿಸಲಾಗಿದ್ದು, ವಿಚಾರಣೆಯನ್ನು ಮುಂದುವರಿಸಲಾಗಿದೆ’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು