ದೆಹಲಿಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಅವಘಡ

ನವದೆಹಲಿ: ವಾಯುವ್ಯ ದೆಹಲಿಯ ಬಾದ್ಲಿ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದ ಗೋದಾಮಿನಲ್ಲಿ ಭಾನುವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ನಂದಿಸಲು ರೋಬೊಟ್ ಅನ್ನು ಬಳಸಲಾಗಿದ್ದು, ಸಾವು-ನೋವಿನ ವರದಿಯಾಗಿಲ್ಲ.
ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಅಧಿಕಾರಿ ಅತುಲ್ ಗರ್ಗ್ ಅವರು, ‘ಶನಿವಾರ ಮಧ್ಯರಾತ್ರಿ 2.18ರ ವೇಳೆಗೆ ರೋಹಿಣಿ ಜೈಲಿನ ಹಿಂಬದಿಯಿರುವ ಬಾದ್ಲಿ ಪ್ರದೇಶದಲ್ಲಿ ಕಳೆದ 2 ವರ್ಷಗಳಿಂದ ಮುಚ್ಚಿರುವ ಪ್ಲಾಸ್ಟಿಕ್ ಸಂಗ್ರಹಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದ ಮಾಹಿತಿ ಲಭ್ಯವಾಯಿತು. ಈ ವೇಳೆ ಸ್ಥಳಕ್ಕೆ ತೆರಳಿ, 36 ಅಗ್ನಿಶಾಮಕದಳದ ವಾಹನಗಳ ಸಿಬ್ಬಂದಿ ಮತ್ತು ರೊಬೋಟ್ ಅನ್ನು ಬಳಸಿ ಬೆಂಕಿ ನಿಯಂತ್ರಿಸಲಾಯಿತು’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.