ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಪಿಡಿಪಿ ಅಧ್ಯಕ್ಷರಾಗಿ ಮೆಹಬೂಬಾ ಮುಫ್ತಿ ಮರು ಆಯ್ಕೆ

Last Updated 22 ಫೆಬ್ರುವರಿ 2021, 10:20 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯ (ಪಿಡಿಪಿ) ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರದ ಅವಧಿ ಮೂರು ವರ್ಷಗಳಾಗಿರುತ್ತವೆ.

‘ಹಿರಿಯ ನಾಯಕ ಗುಲಾಂ ನಬಿ ಲೋನ್‌ ಹಂಜುರಾ ಅವರು ಮೆಹಬೂಬಾ ಮುಫ್ತಿ ಅವರ ಹೆಸರನ್ನು ಸೂಚಿಸಿದರು, ಖುರ್ಷಿದ್‌ ಆಲಂ ಅನುಮೋದಿಸಿದರು’ ಎಂದು ಪಕ್ಷದ ವಕ್ತಾರರು ತಿಳಿಸಿದರು.

‘ಪಿಡಿಪಿ ಹಿರಿಯ ನಾಯಕ ಅಬ್ದುಲ್‌ ರೆಹಮಾನ್‌ ವೀರಿ ಅವರು ಪಕ್ಷದ ಚುನಾವಣಾ ಸಮಿತಿ ಅಧ್ಯಕ್ಷರಾಗಿದ್ದರು. ಹಿರಿಯ ನಾಯಕ ಸುರೀಂದರ್‌ ಚೌಧರಿ ಅವರು ಚುನಾವಣಾ ಅಧಿಕಾರಿಯಾಗಿದ್ದರು’ ಎಂದು ಅವರು ಹೇಳಿದರು.

1998ರಲ್ಲಿ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯನ್ನು ಸ್ಥಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT